ಮೊಬೈಲ್ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ, ಫೋನ್, ಚಾರ್ಜರ್ಗಳ ಮೇಲಿನ ತೆರಿಗೆ ಇಳಿಕೆ
ನಹದೆಹಲಿ : ಕೇಂದ್ರ ಸಚಿವೆ ನಿರ್ಮಾಲ ಸೀತಾರಾಮನ್ ಅವರು ಇಂದು ಮಂಡಿಸಿರುವ ಬಜೆಟ್‌ನಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಉತೇಜನ ನೀಡಲಾಗಿದೆ.
ಈ ಮುಲಕ ಮೊಬೈಲ್ ಪೋನ್, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್ ಮೇಲಿನ ಆಮದು ಸುಂಕವನ್ನು ಶೇಕಾಡ 20ರಿಂದ ಶೇಕಾಡ 15 ಕ್ಕೆ ಇಳಿಸಿದ್ದಾರೆ. ಕಳೆದ 6 ವರ್ಷಗಳಲ್ಲಿ ದೇಶೀಯ ಉತ್ಪಾದನೆಯ ಮೂರು ಪಟ್ಟು ಹೆಚ್ಚಾಗಿದೆ ಹಾಗು ಮೊಬೈಲ್ ಪೋನ್‌ಗಳ ರಪ್ತು 100 ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಹಾಗು ಭಾರತೀಯ ಮೊಬೈಲ್ ಉದ್ಯಮವು ಪ್ರಬುದ್ಧವಾಗಿದೆ, ಅದಕ್ಕಾಗಿ ಗ್ರಾಹಕರ ಹಿತದೃಷ್ಟಿಯಿಂದ ಮೊಬೈಲ್‌ಪೋನ್.ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್ಗಳ ಮೇಲಿನ ಬಿಸಿಡಿ ಬೇಸಿಕ್ ಕಸ್ಟಮ್ಸ್ ಡ್ಯೊಟಿನನ್ನು 15%ಕ್ಕೆ ಇಳಿಸಲು ಮುಂದಾಗಿದ್ದೇವೇ ಹಾಗೂ ಈ ಬಗ್ಗೆ ಪ್ರಸ್ತಾವನೆಯನ್ನು ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರವು ಈ ವರ್ಷದ ಜನವರಿಯಲ್ಲಿ ಮೊಬೈಲ್ ಫೋನ್ ತಯಾರಿಕೆಯಲ್ಲಿ ತೊಡಗಿರುವ ಹಲವಾರು ಬಿಡಿ ಭಾಗಗಳ ಮೇಲಿನ ಆಮದು ಸುಂಕವನ್ನು 15% ರಿಂದ 10% ಕ್ಕೆ ಇಳಿಸಿದೆ. ಇನ್ನು ದೇಶೀಯ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಮೌಲ್ಯವರ್ಧನೆ ಹೆಚ್ಚಿಸುವ ಸಲುವಾಗಿ ಮೊಬೈಲ್ ಫೋನ್, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್ಗಳ ಮೇಲಿನ ಬಿಸಿಡಿಯನ್ನು ಇಳಿಸಲಾಗಿದೆ ಎಂದರು
ಹ್ಯಾಂಡ್‌ಸೆಟ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಕರು ಆಮದು ಸುಂಕವನ್ನು ಕಡಿಮೆ ಮಾಡಲು ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ಭಾರತೀಯ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಆಕರ್ಷಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು
Post a comment
Log in to write reviews