Samayanews.

Samayanews.

2024-12-24 12:20:20

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕದ್ದ 297 ಪುರಾತನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದ ಅಮೆರಿಕ: ಕೃತಜ್ಞತೆ ಸಲ್ಲಿಸಿದ ‌ಮೋದಿ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಮೇರಿಕ ಭೇಟಿ ನೀಡಿದ ಬೆನ್ನಲ್ಲೇ ಕಳ್ಳಸಾಗಣೆ ಮಾಡಲಾಗಿದ್ದ 297 ಪುರಾತನ ವಸ್ತುಗಳನ್ನು ಅಮೆರಿಕ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದೆ. ಸಾಂಸ್ಕೃತಿಕ ಆಸ್ತಿಗಳ ಕಳ್ಳಸಾಗಣೆ ದೀರ್ಘಕಾಲದ ಸಮಸ್ಯೆಯಾಗಿತ್ತು. ಹಾಗೆ ಇತಿಹಾಸದುದ್ದಕ್ಕೂ ಅನೇಕ ಸಂಸ್ಕೃತಿಗಳು ಮತ್ತು ದೇಶಗಳ ಮೇಲೆ ಪರಿಣಾಮ ಬೀರಿದೆ.

‘ಸಾಂಸ್ಕೃತಿಕ ಸಂಪರ್ಕವನ್ನು ಆಳಗೊಳಿಸುವುದು ಮತ್ತು ಸಾಂಸ್ಕೃತಿಕ ಆಸ್ತಿಗಳ ಅಕ್ರಮ ಕಳ್ಳಸಾಗಣೆ ವಿರುದ್ಧದ ಹೋರಾಟವನ್ನು ಬಲಪಡಿಸುವುದಕ್ಕಾಗಿ ಕಳೆದುಕೊಂಡ 297 ಅಮೂಲ್ಯ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ್ದಕ್ಕಾಗಿ ನಾನು ಅಧ್ಯಕ್ಷ ಜೋ ಬೈಡನ್ (Joe Biden) ಮತ್ತು ಯುಎಸ್ (US) ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ’ ಎಂದು ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

2014 ರಿಂದ ಭಾರತವು ಮರಳಿ ಪಡೆದ ಒಟ್ಟು ಪ್ರಾಚೀನ ವಸ್ತುಗಳ ಸಂಖ್ಯೆ 640 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ ಯುಎಸ್‌ನಿಂದ 578 ಪುರಾತನ ವಸ್ತುಗಳು ಭಾರತಕ್ಕೆ ಮರಳಿವೆ.

ಭಾರತಕ್ಕೆ ಹಸ್ತಾಂತರಿಸಲಾದ ಕೆಲವು ಗಮನಾರ್ಹ ಪ್ರಾಚೀನ ವಸ್ತುಗಳಲ್ಲಿ ಕ್ರಿ.ಶ 10-11 ನೇ ಶತಮಾನಕ್ಕೆ ಸೇರಿದ ಮಧ್ಯ ಭಾರತದ ಮರಳುಗಲ್ಲಿನ ‘ಅಪ್ಸರೆ’, ಕ್ರಿ.ಶ 15-16 ನೇ ಶತಮಾನಕ್ಕೆ ಸೇರಿದ ಕಂಚಿನ ಜೈನ ತೀರ್ಥಂಕರ, ಕ್ರಿ.ಶ 3-4 ನೇ ಶತಮಾನಕ್ಕೆ ಸೇರಿದ ಪೂರ್ವ ಭಾರತದ ಟೆರಾಕೋಟಾ ಹೂದಾನಿ ಮತ್ತು ಕ್ರಿ.ಪೂ 1 ರಿಂದ 1 ನೇ ಶತಮಾನಕ್ಕೆ ಸೇರಿದ ದಕ್ಷಿಣ ಭಾರತದ ಕಲ್ಲಿನ ಶಿಲ್ಪ ಸೇರಿವೆ.

ಭಾರತಕ್ಕೆ ಹಿಂತಿರುಗಿಸಲಾದ ಕೆಲವು ಪುರಾತನ ವಸ್ತುಗಳಲ್ಲಿ 17-18 ನೇ ಶತಮಾನಕ್ಕೆ ಸೇರಿದ ದಕ್ಷಿಣ ಭಾರತದ ಕಂಚಿನ ಗಣೇಶ, ಕ್ರಿ.ಶ 15-16 ನೇ ಶತಮಾನದ ಉತ್ತರ ಭಾರತದ ಮರಳುಗಲ್ಲಿನ ಕೆತ್ತಲಾದ ನಿಂತಿರುವ ಬುದ್ಧ, ಕ್ರಿ.ಶ 17-18 ನೇ ಶತಮಾನಕ್ಕೆ ಸೇರಿದ ಪೂರ್ವ ಭಾರತದ ಕಂಚಿನ ವಿಷ್ಣು ಇತರ ಪ್ರಮುಖ ವಸ್ತುಗಳಲ್ಲಿ ಸೇರಿವೆ.

2021 ರಲ್ಲಿ ಮೋದಿ ಅಮೆರಿಕಾಗೆ ಭೇಟಿ ಕೊಟ್ಟಾಗ, 12 ನೇ ಶತಮಾನದ ಸುಂದರವಾದ ಕಂಚಿನ ನಟರಾಜ ಪ್ರತಿಮೆ ಸೇರಿ ಸುಮಾರು 157 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2023 ರಲ್ಲಿ ಅವರ ಯುಎಸ್ ಭೇಟಿಯ ಕೆಲ ದಿನಗಳ ನಂತರ, 105 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದೆ. ಆಸ್ಟ್ರೇಲಿಯಾದಿಂದ 40, ಯುಕೆಯಿಂದ 16 ಕಲಾಕೃತಿಗಳನ್ನು ಮರಳಿ ಪಡೆಯಲಾಗಿದೆ. 2004 ಮತ್ತು 2013 ರ ಅಂತರದಲ್ಲಿ ಕೇವಲ ಒಂದು ಕಲಾಕೃತಿಯನ್ನಷ್ಟೇ ಭಾರತಕ್ಕೆ ಮರಳಿ ತರಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

img
Author

Post a comment

No Reviews