ನೈಋತ್ಯ ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಕೇರಳಾದ್ಯಂತ ದಟ್ಟ ಮೋಡ ಮೇಳೈಸಿವೆ.
ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶಕ್ಕೆ ಅಪ್ಪಳಿಸಿದ್ದ ಚಂಡಮಾರುತ ಅಲೆಗಳು ಬಂಗಾಳ ಕೊಲ್ಲಿಗೆ ನೂಕಿರುವುದರಿಂದ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಮಾರುತಗಳು ಈಶಾನ್ಯ ಭಾರತ ಆವರಿಸಿತ್ತು. ಈಶಾನ್ಯ ಭಾರತದ ಬಹುತೇಕ ಭಾಗಗಳತ್ತ ಮಾರುತಗಳು ಚಲಿಸಲಿದ್ದು ಇದಕ್ಕೂ ಮುನ್ನ, ನೈಋತ್ಯ ಮಾರುತಗಳು ಕೇರಳ ಪ್ರವೇಶಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Post a comment
Log in to write reviews