ಮೇ 31 ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದ್ದು, ಹಿಂದಿನ ವಷ೯ಕ್ಕಿಂತ ಈ ವಷ೯ ಅಧಿಕ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೇಶದ ಕೃಷಿ ಚಟುವಟಿಕೆ ಮತ್ತು ಆಥಿ೯ಕತೆಯ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಮೇ. 31 ರ ವೇಳೆಗೆ ದೇಶದ ದಕ್ಷಿಣದ ತುತ್ತತುದಿಯ ರಾಜ್ಯವಾದ ಕೇರಳದ ಕರಾವಳಿಯನ್ನು ಪ್ರವೇಶಿಸಲಿದೆ.
ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆ, ಈ ವರ್ಷ ನೈಋತ್ಯ ಮುಂಗಾರು 4 ದಿನ ಹಿಂದು-ಮುಂದು ಆಗಬಹುದು. ಈ ಬಾರಿ ಮುಂಗಾರು ಮುಂಚಿತವಾಗಿ ಪ್ರವೇಶ ಮಾಡುತ್ತಿಲ್ಲ. ಸಾಮಾನ್ಯವಾಗಿ ಜೂ.1ರಂದು ಮುಂಗಾರು ಮಾರುತಗಳು ಕೇರಳ ಪ್ರವೇಶಿಸುವ ವಾಡಿಕೆ. ಈ ವಷ೯ವು ಕೂಡಾ ಇದೇ ಸಮಯದಲ್ಲಿ ಮಳೆಯಾಗಬಹುದೆಂದು’ ಎಂದು ತಿಳಿಸಿದ್ದಾರೆ
Post a comment
Log in to write reviews