ಬೆಂಗಳೂರು: ವೈಟ್‌ಫೀಲ್ಡ್‌ನ ಅಲೆಂಬಿಕ್ ಸಿಟಿಯಲ್ಲಿರುವ ಗೂಗಲ್ ಕಚೇರಿಯ ಮಾಸಿಕ ಬಾಡಿಗೆ ಕೇಳಿದರೆ ಸುಸ್ತಾಗುತ್ತೀರ. 6,49,000 ಚದರ ಅಡಿ ಸ್ಥಳಾವಕಾಶ ಹೊಂದಿರುವ ಕಚೇರಿಯನ್ನ ಗೂಗಲ್ ಕಂಪೆನಿ ಗುತ್ತಿಗೆಗೆ ಅಧಾರದ ಮೇಲೆ ಪಡೆದಿದೆ. ಪ್ರತಿ ಚದರ ಅಡಿಗೆ 62 ರೂ. ಮಾಸಿಕ ಬಾಡಿಗೆ ದರದಲ್ಲಿ ಮೂರು ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಕಛೇರಿಯನ್ನು ಬಾಡಿಗೆಗೆ ಪಡೆದಿದೆ.
ಮಾಸಿಕ 4,02,38,000ರೂ ಬಾಡಿಗೆಯ ಮೊತ್ತಪಾವತಿಸುತ್ತಿದೆ. ವರದಿಯೊಂದರ ಪ್ರಕಾರ ಈ ತಿಂಗಳ ಆರಂಭದಲ್ಲಿ ಗೂಗಲ್ ತನ್ನ ಯುಎಸ್ ಕಚೇರಿಗಳಿಂದ ಕೆಲವು ಪ್ರಮುಖ ಉದ್ಯೋಗಿಗಳನ್ನು ಕೈಬಿಟ್ಟ, ನಂತರ ಹೊಸ ಕಚೇರಿ ಸ್ಥಳವನ್ನು ಸ್ವಾಧೀನಪಡಿಸಿಕೊಂಡಿದೆ. ಕಂಪನಿಯು ಕೆಲವು ಸ್ಥಾನಗಳನ್ನು ಭಾರತಕ್ಕೆ ವರ್ಗಾಯಿಸಿದೆ ಎಂದು ತಿಳಿದಿದೆ.
ವರದಿಯ ಪ್ರಕಾರ, 2022 ರಲ್ಲಿ, ಗೂಗಲ್ ಕನೆಕ್ಟ್ ಸರ್ವಿಸಸ್ ಇಂಡಿಯಾ ಪ್ರೈ. ಲಿಮಿಟೆಡ್ ಹೈದರಾಬಾದ್‌ನಲ್ಲಿ 6,00,000 ಚದರ ಅಡಿ ಕಚೇರಿ ಜಾಗಕ್ಕೆ ತನ್ನ ಗುತ್ತಿಗೆಯನ್ನು ನವೀಕರಿಸಿದೆ. ಬೆಂಗಳೂರಿನ ಬಾಗ್‌ಮನೆ ಡೆವಲಪರ್ಸ್‌ನಿಂದ 1.3 ಮಿಲಿಯನ್ ಚದರ ಅಡಿ ಕಚೇರಿ ಸ್ಥಳವನ್ನು ಗುತ್ತಿಗೆ ನೀಡಲು ಗೂಗಲ್ ಒಪ್ಪಿಕೊಂಡಿದೆ.
2020ರಿಂದ, ಭಾರತದಲ್ಲಿ ಗೂಗಲ್‌ನ ಆಫೀಸ್ ಸ್ಪೇಸ್ ಪೋರ್ಟ್‌ಫೋಲಿಯೊ 3.5 ಮಿಲಿಯನ್ ಚದರ ಅಡಿಗಳಷ್ಟು ವಿಸ್ತರಿಸಿದೆ. ಕಂಪನಿಯು ಈಗ ಭಾರತದಾದ್ಯಂತ ಐದು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಟ್ಟು 9.3 ಮಿಲಿಯನ್ ಚದರ ಅಡಿ ಸ್ಥಳಾವಕಾಶನ್ನ ಹೊಂದಿದೆ. ಗೂಗಲ್ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಿಸಿದೆ.
ಕಂಪನಿಯು ತಮಿಳುನಾಡಿನ ಫಾಕ್ಸ್‌ಕಾನ್ ಸೌಲಭ್ಯದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ಮತ್ತು ರಾಜ್ಯದಲ್ಲಿ ಡ್ರೋನ್ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸಿದೆ. ಭಾರತದಲ್ಲಿ ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯು ಪಿಕ್ಸೆಲ್ 8 ಮಾದರಿಯೊಂದಿಗೆ ಪ್ರಾರಂಭವಾಗುವ ನಿರೀಕ್ಷೆ ಇದೆ.
ಕಳೆದ ವರ್ಷ ನಡೆದ ಗೂಗಲ್ ಫಾರ್ ಇಂಡಿಯಾ ಕಾನ್ಫರೆನ್ಸ್‌ನಲ್ಲಿ ಕಂಪನಿಯು ಆರಂಭದಲ್ಲಿ ಪಿಕ್ಸೆಲ್ ಫೋನ್‌ಗಳ ಉತ್ಪಾದನೆಯನ್ನು ಪ್ರಾರಂಭಿಸುವ ಯೋಜನೆಗಳನ್ನು ಹೊಂದಿತ್ತು.
Post a comment
Log in to write reviews