ಬೈರುತ್(ಲೆಬನಾನ್): ಇಸ್ರೇಲ್ ಲೆಬನಾನ್‌ನ ಬೈರುತ್ ಮೇಲೆ ನಡೆಸಿದ ದಾಳಿಯಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಲೆಬನಾನ್‌ನ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಇಸ್ರೇಲ್ ರಾಜಧಾನಿಯಲ್ಲಿರುವ ಕಟ್ಟಡದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 9ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಲೆಬನಾನ್ ದೇಶದಲ್ಲಿ ಹಿಜ್ಬುಲ್ಲಾ ಉಗ್ರಗಾಮಿ ಗುಂಪುಗಳು ಪ್ರಬಲವಾಗಿ ಇರುವ ಪ್ರದೇಶಗಳ ಮೇಲೆ ಇಸ್ರೇಲ್ ಸೆಪ್ಟೆಂಬರ್ ತಿಂಗಳ ಕೊನೆಯಿಂದ ದಾಳಿ ನಡೆಸುತ್ತಿದೆ. ಬುಧವಾರ ಯಾವುದೇ ಎಚ್ಚರಿಕೆ ನೀಡದೇ ವಿಶ್ವಸಂಸ್ಥೆಯ ಪ್ರಧಾನ ಕಚೇರಿ, ಪ್ರಧಾನ ಮಂತ್ರಿ ಕಚೇರಿ ಮತ್ತು ಸಂಸತ್ತಿನ ಸಮೀಪದಲ್ಲಿರುವ ಕಟ್ಟಡಕ್ಕೆ ಇಸ್ರೇಲ್ ದಾಳಿ ನಡೆಸಿದೆ. ಲೆಬನಾನ್‌ನ ಆರೋಗ್ಯ ಸಚಿವಾಲಯವು ಹಿಜ್ಬುಲ್ಲಾದ ನಾಗರಿಕ ರಕ್ಷಣಾ ಘಟಕದ ಏಳು ಸದಸ್ಯರು ಈ ದಾಳಿಯಲ್ಲಿ ಕೊಲ್ಲಲ್ಪಟ್ಟರು ಎಂದು ತಿಳಿಸಿದೆ.
ಲೆಬನಾನ್‌ನ ಗಡಿಯಾದ್ಯಂತಕ್ಕೂ ನಿರಂತರವಾಗಿ ಇಸ್ರೇಲ್ ಮತ್ತು ಹಿಜ್ಬುಲ್ಲಾಗಳ ನಡುವೆ ಪ್ರತಿದಿನ ಯುದ್ಧ ನಡೆಯುತ್ತಿದ್ದು, ಹಮಾಸ್‌ನ ಗಡಿಯಾಚೆಗೆ ನಡೆದ ದಾಳಿಯಲ್ಲಿ 1,200 ಇಸ್ರೇಲಿಗಳು ಅಕ್ಟೋಬರ್ 7, 2023 ರಂದು ಮೃತಪಟ್ಟಿದ್ದರು. ಮತ್ತು 250 ಇತರರನ್ನು ಒತ್ತೆಯಾಳಾಗಿ ಹಿಜ್ಬುಲ್ಲಾ ತೆಗೆದುಕೊಂಡಿತ್ತು.
ಇದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾ ಪಟ್ಟಿಯಲ್ಲಿರುವ ಉಗ್ರಗಾಮಿ ಗುಂಪಿನ ವಿರುದ್ಧ ಯುದ್ಧ ಘೋಷಿಸಿತ್ತು. ಈ ಪ್ರದೇಶದಲ್ಲಿ 41,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟರು. ಮತ್ತು ಸ್ಥಳೀಯ ಆರೋಗ್ಯ ಅಧಿಕಾರಿಗಳ ಪ್ರಕಾರ ಸತ್ತವರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಅರ್ಧಕ್ಕಿಂತ ಹೆಚ್ಚಿದ್ದರು.
Post a comment
Log in to write reviews