ಬಾಗಲಕೋಟೆ: ಹೆರಿಗೆ ಸಮಯದಲ್ಲಿ ವೈದ್ಯರು ಗರ್ಭಿಣಿಯ ಗರ್ಭಕೋಶ ಕತ್ತರಿಸಿದ ಕಾರಣ ತಾಯಿ ಮತ್ತು ಶಿಶು ಸಾವನಪ್ಪಿರುವ ಘಟನೆ ಬೀಳಗಿ ತಾಲೂಕ ಪಟ್ಟಣದ ನಾಗರಾಳ ಬಾಯಿ ಆಸ್ಪತ್ರೆಯಲ್ಲಿ ನಡೆದಿದೆ.
ಜೂನ್.23ರಂದು ಲಕ್ಷ್ಮೀ ಭಾಯಿಗೆ ನಾಗರಾಳ ಬಾಯಿ ಆಸ್ಪತ್ರೆಯ ವೈದ್ಯರು ಹೆರಿಗೆ ದಿನಾಂಕವನ್ನು ನಿಗದಿ ಪಡಿಸಿದ್ದರು. ಹಾಗಾಗಿ ಲಕ್ಷ್ಮೀ ಬಾಯಿ ಆಸ್ಪತ್ರೇಗೆ ದಾಖಲಾಗಿದ್ದರು. ಹೆರಿಗೆ ಸಂಧರ್ಭದಲ್ಲಿ ಮಗುವನ್ನು ಹೊರತೆಗೆಯುವಾಗ ವೈದ್ಯರು ಗರ್ಭಕೋಶ ಕತ್ತರಿಸಿದ್ದಾರೆ. ಇದರಿಂದಾಗಿ ರಕ್ತಸ್ರಾವ ಹೆಚ್ಚಾಗಿದೆ. ಇದನ್ನು ಕುಟುಂಬಸ್ಥರು ಪ್ರಶ್ನಿಸಿದಾಗ ಹೆರಿಗೆ ಸಮಯದಲ್ಲಿ ರಕ್ತ ಸ್ರಾವ ಮಾಮೂಲಿ ಎಂದು ಹೇಳಿದ್ದಾರೆ.
ಹಾಗೇಯೆ ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ನಿರ್ಲಕ್ಷ್ಯ ತೋರಿದ್ದು, ಇನ್ನೇನು ಮಹಿಳೆ ಸಾಯುತ್ತಾಳೆ ಎನ್ನುವ ಸಮಯದಲ್ಲಿ ಬಾಗಲಕೋಟೆ ಧನುಷ್ ಆಸ್ಪತ್ರೆಗೆ ಹೋಗಲು ಹೇಳಿದ್ದಾರೆ. ಈ ವೇಳೆ ಮಹಿಳೆ ಮತ್ತು ಮಗು ಧನುಷ್ ಆಸ್ಪತ್ರೆ ತಲುಪುದರ ಒಳಗೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯ ಕುಟುಬಂಸ್ಥರು ವೈದ್ಯರ ನಿರ್ಲಕ್ಷ್ಯ ದಿಂದ ತಾಯಿ ಮಗು ಸಾವನ್ನಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಪೊಲೀಸ್ ಇಲಾಖೆಯವರು ಆಗಮಿಸಿ ಸಂಬಂಧಿತ ಮೇಲಾಧಿಕಾರಿಗಳು ಹಾಗೂ ಈ ಘಟನೆ ನಿರ್ಲಕ್ಷಿಸಿದ ವೈದ್ಯರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದು ಕೊಳ್ಳುವುದಾಗಿ ತಿಳಿಸಿದ್ದಾರೆ.
Post a comment
Log in to write reviews