ಕೊಪ್ಪಳ: ಗವಿಸಿದ್ಧ ಮಠದ ವಸತಿ ನಿಲಯದಲ್ಲಿ ಸಾವಿರಾರು ಮಕ್ಕಳಿಗೆ ಭಾನುವಾರ ಸಾಯಂಕಾಲ ಪಾನಿಪುರಿ ನೀಡಲಾಯಿತು.
ಗವಿಸಿದ್ಧ ಮಠದ ವಸತಿ ನಿಲಯದಲ್ಲಿ ಸರಿಸುಮಾರು ಐದು ಸಾವಿರಕ್ಕೂ ಹೆಚ್ಚು ಮಕ್ಕಳು ವಾಸವಾಗಿದ್ದಾರೆ. ಈ ಮಕ್ಕಳಿಗೆ ಉಚಿಕೊಪ್ಪಳತವಾಗಿ ಶಿಕ್ಷಣ ಮತ್ತು ದಿನನಿತ್ಯ ಅನ್ನದಾಸೋಹ ವ್ಯವಸ್ಥೆಯನ್ನು ಮಾಡಲಾಗಿದೆ. ಭಾನುವಾರ ಸಾಯಂಕಾಲ ಮಠದ ವಸತಿ ನಿಲಯದ ಐದು ಸಾವಿರ ಮಕ್ಕಳಿಗೆ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಪಾನಿಪುರಿಯನ್ನು ಬಡಿಸಿದರು. ಬಡಿಸುವ ಜೊತೆಗೆ ಮಕ್ಕಳಿಗೆ ಪಾನಿಪುರಿ ತಿನ್ನಿಸಿದರು
ಶ್ರೀ ಮಠದಲ್ಲಿ ನಡೆಯುವ ಜಾತ್ರಾಮಹೋತ್ಸವ ದಕ್ಷಿಣ ಭಾರತದ ಕುಂಭಮೇಳವೇಂದೆ ಖ್ಯಾತಿ ಗಳಿಸಿದೆ. ದಾಸೋಹ, ಜಾಗೃತಿ ಮತ್ತು ಸರ್ವಧರ್ಮ ಸಮನ್ವಯದ ಸಮಾಗಮನ, ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಜಾತ್ರೆಯಲ್ಲಿಯೂ ಭಕ್ತರಲ್ಲಿ ಹಾಗೂ ಜನರಲ್ಲಿ ವಿಶಿಷ್ಟ ರೀತಿಯ ಜಾಗೃತಿ ಮೂಡಿಸಲಾಗುತ್ತಿದೆ. ಜಾತ್ರೆಗೊಂದು ಹೊಸರೂಪ-ಹೊಸ ಮೆರುಗು ನೀಡುವ ಮೂಲಕ ಶ್ರೀ ಮಠವು ದೇಶ, ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ.
Post a comment
Log in to write reviews