ಕಲುಷಿತ ನೀರು ಕುಡಿದು ಅಸ್ವಸ್ತ ರಾಗಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಸಾಲುಂಡಿ ಗ್ರಾಮದಲ್ಲಿ ಸಂಭವಿಸಿದೆ, ಅಸ್ವಸ್ಥರನ್ನ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರಾಭಿವೃದ್ಧಿ ಪಾಧಿಕಾರದಲ್ಲಿ ಯುಜಿಡಿ ಮಾಡುವಾಗ ಸೆಪ್ಟಿಕ್ ಟ್ಯಾಂಕ್ ಸ್ವಚ್ಚ ಮಾಡಿರದ ಕಾರಣ ಆ ನೀರನ್ನ ಸೇವಿಸಿ ಗ್ರಾಮಸ್ಥರು ವಾಂತಿ,ಬೇದಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ರು ಇದರಲ್ಲಿ ಸುಮಾರು 47 ಮಂದಿ ಚೇತರಿಸಿಕೊಂಡಿದ್ದಾರೆ. ಮತ್ತೊಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಒಬ್ಬರು ಮಾತ್ರ ಸಾವಿಗೀಡಾಗಿದ್ದಾರೆ, ಕುಡಿಯುವ ನೀರಿನಲ್ಲಿ ಮಲೀನ ಸೇರಿ ಈ ಘಟನೆ ಜರುಗಿದೆ. ಜಿಲ್ಲಾಧಿಕಾರಿಗಳು, ಆರೋಗ್ಯಧಿಕಾರಿಗಳಿಗೆ ತಕ್ಷಣ ಗ್ರಾಮಕ್ಕೆ ಹೆಚ್ಚಿನ ವೈದ್ಯರನ್ನು ಕಳುಹಿಸಲಾಗಿದೆ. ಭೇದಿ, ನಿರ್ಜಲೀಕರಣಕ್ಕಾಗಿ ಮನೆಯಲ್ಲೇ ಓಆರ್‌ಎಸ್ ತಯಾರಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ಅನಾಹುತ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಕಳೆದ ಎರೆಡು ದಿನಗಳ ಹಿಂದೆ 48 ಜನರಿಗೆ ವಾಂತಿ-ಭೇದಿ ಶುರಿವಾಗಿದೆ.ನಿನ್ನೆ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ನೀರು ಕಲುಷಿತಗೊಂಡ ಕಾರಣ ಈ ಘಟನೆ ನಡೆದಿದೆ. 5 ಜನ ವೈದ್ಯರು, ಮತ್ತೆ ಆರೋಗ್ಯ ಇಲಾಖೆ ತಂಡ ಕೆ.ಸಾಲುಂಡಿ ಗ್ರಾಮದಲ್ಲಿ ಕ್ಯಾಂಪ್ ಮಾಡಿದೆ.ಗ್ರಾಮದ 75 ಜನರಿಗೆ ವಾಂತಿ-ಬೇದಿ ಕಾಣಿಸಿಕೊಂಡಿದೆ,
ಯುವಕನ ಸಾವಿಗೆ ಮೂಡಾ ಅಧಿಕಾರಿಗಳೇ ಕಾರಣವೆಂದು ಅಧಿಕಾರಿಗಳ ಮೇಲೆ ಗಂಭೀರ ಆರೋಪವನ್ನ ಶಾಸಕ ಜಿ.ಟಿ ದೇವೇಗೌಡ ಮಾಡಿದ್ದಾರೆ. ಆಸ್ಪತ್ರೆಯ ಎಲ್ಲಾ ಚಿಕಿತ್ಸಾ ವೆಚ್ಚವನ್ನ ನಾನೇ ಭರಿಸುತ್ತೇನೆ ಎಂದರು. ಸಿಎಂ ಪರಿಹಾರ ನೀಡಬೇಕು, ಜನರು ಸಿಎಂ ಸಿದ್ದರಾಮಯ್ಯ ಅವರನ್ನ ಬೆಂಬಲಿಸಿಕೊಂಡು ಬಂದಿದ್ದಾರೆ ಕುಟುಂಬಕ್ಕೆ ಪರಿಹಾರ ಕೊಡುವಂತೆ ಸಿಎಂಗೆ ಮನವಿ ಮಾಡಿದರು.
ಇನ್ನು ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿ ಮಾಹಿತಿ ತಿಳಿದುಕೊಂಡರು. ನೀರು ಕಲುಷಿತಗೊಳ್ಳಲು ಕಾರಣ ಏನು ಮತ್ತು ಯಾರು ಪತ್ತೆಹಚ್ಚಿ ಸೂಕ್ತಕ್ರಮ ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಹೇಳಿದರು, ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಅದರಂತೆ ಆರೋಗ್ಯಾಧಿಕಾರಿಗಳು ಮುಂಜಗೃತಾ ಕ್ರಮವಾಗಿ ಜಿಲ್ಲಾಸ್ಪತ್ರೆ ಹಾಗೂ ಕೆಆರ್.ಆಸ್ಪತ್ರೆಯಲ್ಲಿ ತಲಾ 25 ಬೆಡ್ ಕಾದಿರಿಸಲಾಗಿದೆ.
Post a comment
Log in to write reviews