ಮುಂಬೈ: ಐಪಿಎಲ್‌ನಲ್ಲಿ 5 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಮುಂಬೈ ಇಂಡಿಯನ್ಸ್(Mumbai Indians) ತಂಡವು ಮುಂಬರುವ ಐಪಿಎಲ್ ಆವೃತ್ತಿಗೂ ಮುನ್ನ ತನ್ನ ತಂಡದ ನಾಯಕರು ಯಾರೆಂಬ ಮಹತ್ವದ ಘೋಷಣೆಯ ಸುಳಿವೊಂದನ್ನು ಸ್ವತಃ ಫ್ರಾಂಚೈಸಿಯೇ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟುಕೊಟ್ಟಿದೆ. ಹೌದು, ಪ್ರಧಾನ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು ನೂತನ ನಾಯಕನನ್ನಾಗಿ ಮಾಡಲು ನಿರ್ಧರಿಸಿದಂತೆ ಎಲ್ಲ ರೀತಿಯ ಸುಳಿವು ಬಿಟ್ಟುಕೊಟ್ಟಿದೆ. ಬುಮ್ರಾ ಅವರು ಜನಗಳ ಮಧ್ಯೆ ಕೈಬೀಸುತ್ತಾ ರ‍್ಯಾಂಪ್ ವಾಕ್ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದೆ. ಹೀಗಾಗಿ ಬುಮ್ರಾ ನಾಯಕನಾಗುವುದು ಖಚಿತವಾಗಿದ್ದು, ಅಧಿಕೃತ ಮುದ್ರೆ ಬೀಳೋದು ಮಾತ್ರ ಬಾಕಿ ಇದೆ.
ಕಳೆದ ಬಾರಿ ರೋಹಿತ್ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ (Hardik Pandya)ಗೆ ನಾಯಕ ಪಟ್ಟ ನೀಡಲಾಗಿತ್ತು. ಆದರೆ, ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡ ಎಂದೂ ಕಾಣದ ವೈಫಲ್ಯ ಕಂಡಿತ್ತು. ಪಾಂಡ್ಯ ನಾಯಕನಾಗುವ ಬಗ್ಗೆ ಬುಮ್ರಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಬಳಿಕ ಫ್ರಾಂಚೈಸಿಯೇ ಅವರನ್ನು ಸಮಾಧಾನಪಡಿಸಿತ್ತು. ಹಾಗಾಗಿ ಇದೀಗ ಬುಮ್ರಾ ಅವರನ್ನೇ ನಾಯಕನನ್ನಾಗಿ ಮಾಡಲು ಮುಂದಾಗಿದೆ. ಬುಮ್ರಾ ಕಾರ್ಯವೈಖರಿ ಬಗ್ಗೆಯೂ ಸಹ ಆಟಗಾರರಿಗೆ ಸಮಧಾನವಿದೆ. ಬುಮ್ರಾ ರೋಹಿತ್ಗೆ ಬಹಳ ಆತ್ಮಿಯರಾಗಿರುವ ಕಾರಣ ಬುಮ್ರಾ ನಾಯಕನಾದರೆ ರೋಹಿತ್ ಕೂಡ ಮುಂಬೈ ತೊರೆಯಲು ಹಿಂದೇಟು ಹಾಕಬಹುದು ಎನ್ನುವುದು ಫ್ರಾಂಚೈಸಿಯ ಯೋಜನೆ.
ಜಸ್ಪ್ರೀತ್ ಬುಮ್ರಾ ಅವರು ಇದುವರೆಗೆ 133 ಐಪಿಎಲ್ ಆಡಿದ್ದು 165 ವಿಕೆಟ್ ಕೆಡವಿದ್ದಾರೆ. 2013ರಲ್ಲಿ ಮುಂಬೈ ತಂಡದ ಪರ ಐಪಿಎಲ್ ಪದಾರ್ಪಣೆ ಮಾಡಿದ್ದ ಬುಮ್ರಾ ಇದುವರೆಗೂ ಮುಂಬೈ ಪರವೇ ಆಡುತ್ತಿದ್ದಾರೆ. ಹೀಗಾಗಿಯೂ ಕೂಡ ಅವರನ್ನು ನಾಯಕನಾಗಿ ಮಾಡಿರಬಹುದು.
Post a comment
Log in to write reviews