ಮಂಡ್ಯ: ನಾಗಮಂಗಲದ ಬದರಿಕೊಪ್ಪಲಿನಲ್ಲಿ ಗಣೇಶನ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣದ ಸಂಬಂಧ 53 ಜನರ ವಿರುದ್ಧ FIR ದಾಖಲಾಗಿದ್ದು. ನಾಗಮಂಗಲ ಟೌನ್ PSI ಬಿ.ಜೆ.ರವಿ ದೂರು ಆಧರಿಸಿ , 23 ಜನ ಹಿಂದೂ ಯುವಕರು, 30 ಜನ ಅನ್ಯ ಕೋಮಿನ ಯುವಕರ ವಿರುದ್ಧ FIR ದಾಖಲಾಗಿದೆ.
ಭಾರತೀಯ ನ್ಯಾಯ ಸಂಹಿತೆ 2023, 109, 115(2), 118(1), 121(1), 132, 189(2), 189(3), 189(4), 190, 191(1), 191(2), 191(3), 324(4), 324(5), 326(F), 326(G) ಅಡಿಯಲ್ಲಿ ಬದ್ರಿಕೊಪ್ಪಲು ಗ್ರಾಮದ ಕಿರಣ, ಭರತ ಬಿನ್ ಪುಟ್ಟರಾಜು, ಅಭಿಷೇಕ್, ಗೋವಿಂದ, ಅರುಣ, ಸಂಜಯ್, ಕೀರ್ತಂ ಬಿನ್ ಮೂರ್ತ, ಪೃಥ್ವಿ, ಹೇಮಂತ ಬಿನ್ ಲೇಟ್ ಕೇಶವಶೆಟ್ಟಿ, ಚಂದ್ರಶೇಖರ ಬಿನ್ ಲೇಟ್ ಸುಬ್ಬಾಶೆಟ್ಟಿ, ಶ್ರೀನಿವಾಸ್ ಬಿನ್ ಲೇಟ್ ಸುಬ್ರಾಶೆಟ್ಟಿ, ಶಿವು ಬಿನ್ ಕುಮಾರ, ರಾಮಚಂದ್ರ ಬಿನ್ ನಂಜಪ್ಪ, ಹರೀಶ ಬಿನ್ ಕುಮಾರ್, ದಿವಾಕರ ಬಿನ್ ಲೇಟ್ ಅಂಜನಮೂತರ್ ನಾಗಮಂಗಲ ಟೌನ್ನ ಮೇಗಲಕೇರಿಯ ವಿನಯ್ ಅಲಿಯಾಸ್ ಡಾಗ್ ವಿನಿ, ಮಾರಿಗುಡಿ ಸರ್ಕಲ ಪ್ರವೀಣ್ ಕುಮಾರ್ ಮೇಲೆ FIR ದಾಖಲಿಸಲಾಗಿದೆ.
ಘಟನೆಯ ವಿವರ: ಬದರಿಕೊಪ್ಪಲಿನಲ್ಲಿ ನಿನ್ನೆ ಮಧ್ಯಾಹ್ನ 1.30ಕ್ಕೆ ಗಣೇಶ ವಿಸರ್ಜಣೆ ಕಾರ್ಯ ಪ್ರಾರಂಭವಾಗುತ್ತದೆ. ನಂತರ ಸಂಜೆ 7.30ಕ್ಕೆ ಮಸೀದಿ ಹತ್ತಿರ ಬಂದ 80 ರಿಂದ 90 ಜನ ಯುವಕರ ಗುಂಪು ಡ್ಯಾನ್ಸ್, ಪಟಾಕಿಯನ್ನು ಹೊಡೆದು ಘೋಷಣೆ ಕೂಗಿದ್ದರು. ಡ್ಯಾನ್ಸ್ ಘೋಷಣೆ ಕೂಗುತ್ತಿದ್ದಂತೆ ಮಸೀದಿ ಕಡೆಯಿಂದ 40ಕ್ಕೂ ಹೆಚ್ಚು ಯುವಕರು ಸೇರಿಕೊಳ್ಳುತ್ತಾರೆ. ಬಳಿಕ ಕಲ್ಲೆಸೆತವಾಗುತ್ತದೆ. ಸರಿಯಾಗಿ 7.45ಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ಶುರುಮಾಡಿ, ಬಲವಂತವಾಗಿ ಪೊಲೀಸರು ಗಣೇಶನ ಮೆರವಣೆಗೆಯನ್ನು ಮುಂದಕ್ಕೆ ಸಾಗಿಸುತ್ತಾರೆ.
ನಂತರ 200 ಮೀಟರ್ ದೂರದಲ್ಲಿರುವ ಪೊಲೀಸ್ ಠಾಣೆಗೆ 7.55ಕ್ಕೆ ಯುವಕರು ಜಮಾವಣೆವಾಗುತ್ತಾರೆ. ಫೋನ್ ಕಳೆದು ಹೋಯಿತು, ಪೊಲೀಸರು ನಮಗೆ ತಳ್ಳಿ ಗಾಯ ಆಗಿದೆ ಎಂದು ಪ್ರತಿಭಟನೆಗೆ ಮುಂದಾಗುತ್ತಾರೆ. 8.30ರ ತನಕ ಪ್ರತಿಭಟನೆಯನ್ನು ಮಾಡುತ್ತಿರುತ್ತಾರೆ. ನಂತರ ಯುವಕರ ಗುಂಪುಗಳು ಎರಡು ಕಡೆಯವರು ಫೋನ್ ಮಾಡಿ ಇಬ್ಬರ ಕಡೆಯವರನ್ನ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಠಾಣೆ ಎದುರು ಸೇರಿಸುತ್ತಾರೆ. ಬಳಿಕ ಘೋಷಣೆಗಳು, ಕಲ್ಲು ತೂರಾಟ ಶುರುವಾಗುತ್ತದೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ. ಸ್ವಲ್ಪ ಸಮಯದ ನಂತರ ಬೈಕ್ ಟೈಯರ್ಗೆ ಎರಡು ಕಡೆಗಳಿಂದ ಬೆಂಕಿ ಹಚ್ಚಲು ಪ್ರಾರಂಭವಾಗುತ್ತದೆ.
Post a comment
Log in to write reviews