ನವದೆಹಲಿ: ಇಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಆ ಕಾರಣಕ್ಕೆ ಇಂದು ರಾಷ್ಟ್ರವ್ಯಾಪಿ ಬ್ಯಾಂಕಿಂಗ್ ಸೇವೆಗಳು ಮತ್ತು ವಹಿವಾಟುಗಳು ಮೇಲೆ ಪರಿಣಾಮ ಬೀರಲಿದೆ. ಬ್ಯಾಂಕ್ ಸಿಬ್ಬಂದಿ ಸಂಘದ ಹದಿಮೂರು ಪದಾಧಿಕಾರಿಗಳನ್ನು ಚಾರ್ಜ್ ಶೀಟ್ ಮಾಡಿರುವ ಬ್ಯಾಂಕ್ ಆಫ್ ಇಂಡಿಯಾದ ಕ್ರಮವನ್ನು ವಿರೋಧಿಸಿ ಇಂದು ಎಐಬಿಇಎ ರಾಷ್ಟ್ರವ್ಯಾಪಿ ಮುಷ್ಕರವನ್ನು ಕೈಗೊಳ್ಳಲಾಗಿದೆ.
ಇನ್ನು ಈ ಬಗ್ಗೆ ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಂ ಅವರು ಪ್ರತಿಕಾ ಪ್ರಕಟನೆಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಮುಷ್ಕರದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು. ಸರ್ಕಾರಕ್ಕೆ ತನ್ನ ಎಲ್ಲ ಬೇಡಿಕೆಗಳನ್ನು ಪ್ರಸ್ತಾಪಿಸಿದ್ದೇವೆ ಎಂದು ತಾವು ಹಂಚಿಕೊಂಡಿರುವ ಪ್ರತಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹಾಗು ಮೇಲಿನ ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿ ಈ ಮುಷ್ಕರ ಮಾಡಲಾಗುತ್ತಿದೆ ಎಂದು ವೆಂಕಟಾಚಲಂ ಹೇಳಿದ್ದಾರೆ.
ಇಂದಿನ ಬ್ಯಾಂಕ್ ಮುಷ್ಕರದಲ್ಲಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ಬ್ಯಾಂಕ್ ಉದ್ಯೋಗಿಗಳ ರಾಷ್ಟ್ರೀಯ ಒಕ್ಕೂಟ, ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಯೂನಿಯನ್-ಕೇರಳದ 23 ನೇ ದ್ವೈವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕಾಗಿ ತನ್ನ ಹದಿಮೂರು ಅಧಿಕಾರಿಗಳ ವಿರುದ್ಧ ಬ್ಯಾಂಕ್ ಆಫ್ ಇಂಡಿಯಾ ನೋಟಿಸ್ ನೀಡಿ, ಕ್ರಮ ತೆಗೆದುಕೊಂಡು ಚಾರ್ಜ್ ಶೀಟ್ ಸಲ್ಲಿಸಿದೆ. ಈ ಕಾರಣಕ್ಕೆ ಇಂದು ಬ್ಯಾಂಕ್ಗಳು ಮುಷ್ಕರ್ವನ್ನು ಮಾಡುತ್ತಿದೆ.ಸಂಘ ಸೇರಿದಂತೆ ಸುಮಾರು ಐದು ಬ್ಯಾಂಕ್ ಯೂನಿಯನ್‌ಗಳ ಸದಸ್ಯರು ಭಾಗವಹಿಸಲಿದ್ದಾರೆ.
Post a comment
Log in to write reviews