ಟರ್ಕು( ಫಿನ್ಲೆಂಡ್): ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಫಿನ್ಲೆಂಡ್ ನಲ್ಲಿ ನಡೆದ ಪಾವೊ ನುರ್ಮಿ ಗೇಮ್ಸ್ನಲ್ಲಿ ಬಂಗಾರ ಪದಕ ಜಯಿಸಿದ್ದಾರೆ.
ಈ ಹಿಂದೆ ವಿಶ್ವ ಚಾಂಪಿಯನ್ ಹಾಗೂ ಒಲಂಪಿಕ್ ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗಳಿಸಿದ್ದರು. ಈಗ ಮತ್ತೊಂದು ಚಿನ್ನದ ಪದಕವನ್ನು ಅವರ ಮುಡಿಗೇರಿಸಿಕೊಂಡಿದ್ದಾರೆ.
ಇತ್ತೀಚಿಗೆ ನಡೆದ ಓಸ್ಟಾವಾ ಗೋಲ್ಡನ್ ಸ್ಟೈಕ್ ಕೂಟದಿಂದ ನೀರಜ್ ಚೋಪ್ರಾ ಹೊರಗುಳಿದಿದ್ದರು. ಮಂಗಳವಾರ ನಡೆದ ಸ್ಪರ್ಧೆಯ 3ನೇ ಪ್ರಯತ್ನದಲ್ಲಿ 85.97 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಅಗ್ರಸ್ಥಾನ ಪಡೆದರು.
ಜಾಗತಿಕ ಮಟ್ಟದ ಸ್ಟಾರ್ಗಳಾದ ಆ್ಯಂಡರ್ಸನ್ ಪೀಟರ್ಸ್, ಕೆಶೋರ್ನ್ ವಾಲ್ಕಾಟ್, ಒಲಿವರ್ ಹೆಲಂದರ್ ಮತ್ತು ಮ್ಯಾಕ್ಸ್ ಡೆಂಗ್ ಭಾರತೀಯ ಅಥ್ಲೆಟ್ಗೆ ಪ್ರಬಲ ಸ್ಪರ್ಧೆ ಒಡ್ಡಬಹುದೆಂದು ನಿರೀಕ್ಷಿಸಲಾಗಿತ್ತು.
Post a comment
Log in to write reviews