Samayanews.

Samayanews.

2024-11-15 07:54:53

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಠಿಸಿದ ಎನ್ಇಪಿ ಮತ್ತು ಎಸ್ಇಪಿ

ಬೆಂಗಳೂರು:ಎನ್ಇಪಿ 2020ರ ಬದಲಿಗೆ ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ಸರ್ಕಾರ ಮುಂದಾಗಿದ್ದು,ಅದಕ್ಕಾಗಿ ಸುಖದೇವ್ ಥಾರೋಟ್ ರ ನೇತೃತ್ವದಲ್ಲಿ 15 ಸದಸ್ಯರ ತಂಡವನ್ನ ರಚನೆ ಮಾಡಲಾಗಿತ್ತು.ಈ ನಿಟ್ಟಿನಲ್ಲಿ ಇಗಾಗಲೇ ಪಠ್ಯಕ್ರಮಗಳ  ಪರಿಷ್ಕರಣೆ ಕಾರ್ಯ ಆರಂಭವಾಗಿದೆ. ಈ ವರ್ಷದಿಂದಲೆ  ರಾಜ್ಯದಲ್ಲಿ ಎಸ್ಇಪಿ ಜಾರಿಗೊಳಿಸಲಾಗುತ್ತಿದೆ.
ಈ ಹಿಂದೆ ಕೇಂದ್ರ ಸರ್ಕಾರ ಎನ್ಇಪಿಯನ್ನ ಜಾರಿಗೊಳಿಸಿದ್ದು ಅದು 5+3+3+4ರ ಮಾದರಿಯನ್ನ ಒಳಗೊಂಡಿತ್ತು.ಇದರ ಪ್ರಕಾರ ವಿದ್ಯಾರ್ಥಿಗಳು  4 ವರ್ಷದ ಪದವಿ ಮತ್ತು 1 ವರ್ಷದ ಸ್ನಾತಕೋತ್ತರ ಪದವಿ ಓದಬೇಕು.ರಾಷ್ರ್ಟೀಯ ಶಿಕ್ಷಣ ನೀತಿ 2020 ಪ್ರಕಾರ ಮೊದಲ ವರ್ಷ ಪೂರೈಸಿದವರಿಗೆ ಗ್ರ್ಯಾಡ್ಜುವೇಟ್ ಸರ್ಟಿಫಿಕೆಟ್ ಎರಡನೇ ವರ್ಷಕ್ಕೆ ಗ್ರ್ಯಾಡ್ಜುವೇಟ್ ಡಿಪ್ಲಮೊ ಹಾಗೂ ಮೂರನೇ ವರ್ಷಕ್ಕೆ ಗ್ರ್ಯಾಡ್ಜುವೇಟ್ ಡಿಗ್ರಿ ಪ್ರತ್ಯೇಕ ಸರ್ಟಿಫಿಕೇಟ್ ಒಳಗೊಂಡಿದ್ದು ಯಾವುದೇ ವರ್ಷದಲ್ಲಿ ಶಿಕ್ಷಣ ನಿಲ್ಲಿಸಿದರೂ ಆ ವರ್ಷದ ಸರ್ಟಿಫೀಕೇಟ್ ನೀಡಲಾಗುವುದು.
ಆದರೆ ಪ್ರಸ್ತುತ ವರ್ಷದಿಂದ  ರಾಜ್ಯದಲ್ಲಿ ಎಸ್ಇಪಿ ಜಾರಿಯಾಗುತ್ತಿವ ಹಿನ್ನಲೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಲ್ಲಿ ನಾವು 4 ವರ್ಷದ ಪದವಿ ಮಾಡಬೇಕೋ ಅಥವಾ 3 ವರ್ಷದ ಪದವಿ ಪೂರೈಸಬೇಕೊ ಎನ್ನುವಂತಹ ಗೊಂದಲ ಸೃಷ್ಟಿಯಾಗಿವೆ.
 

img
Author

Post a comment

No Reviews