ಬೆಂಗಳೂರು : ಬೆಂಗಳೂರು ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ದ್ವಾರವನ್ನು ತೆರೆಯಲಾಗಿದೆ.
ಮೆಜೆಸ್ಟಿಕ್ ಮೆಟ್ರೊ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ನೇರಳೆ ಮತ್ತು ಹಸಿರು ಮಾಗ೯ ಬದಲಾವಣೆಗೆ ಅನುಕೂಲವಾಗುವಂತೆ ನೂತನ ದ್ವಾರವನ್ನು ಸೋಮವಾರ ತೆರೆಯಲಾಗಿದೆ.
ಕಾನ್ ಕೋಸ್‌೯ ಮಟ್ಟದಲ್ಲಿರುವ ಈ ದ್ವಾರವು ನೇರಳೆ ಮಾಗ೯ದ ಎರಡನೇ ಪ್ಲಾಟ್ ಫಾಮ್‌೯ ನಡುವೆ ನೇರವಾಗಿ ಸಂಪಕ೯ ಕಲ್ಪಿಸಿದೆ. ಇದರ ಪಕ್ಕದಲ್ಲಿ ಇರುವ ಎಸ್ಕಲೇಟರ್ ಹಾಗೂ ಮೆಟ್ಟಿಲುಗಳ ಮೂಲಕವೂ ಮಾಗ೯ ಬದಲಾವಣೆ ಮಾಡಿಕೊಳ್ಳಬಹುದು.
ಸದ್ಯ 73.81 ಕಿ.ಮೀ. ಉದ್ದದ ಮಾರ್ಗದಲ್ಲಿ ಸೇವೆ ಕಲ್ಪಿಸುತ್ತಿರುವ 'ನಮ್ಮ ಮೆಟ್ರೊ'ಗೆ ಮೆಜೆಸ್ಟಿಕ್ ಮಾತ್ರವೇ ಇಂಟರ್‌ಚೇಂಜ್ ನಿಲ್ದಾಣವಾಗಿದೆ.
ಪ್ರತಿದಿನ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಇದನ್ನು ಬಳಸುತ್ತಿದ್ದರು. ಪೀಕ್ ಅವರ್‌ನಲ್ಲಿ ಇಲ್ಲಿ ವಿಪರೀತ ಜನದಟ್ಟಣೆ ಉಂಟಾಗುತ್ತಿದ್ದು, ಅದರಲ್ಲೂ ನೇರಳೆ ಮತ್ತು ಹಸಿರು ಮಾರ್ಗ ಬದಲಾವಣೆ ಸಂದರ್ಭದಲ್ಲಿ ಪ್ರಯಾಣಿಕರ ನಡುವೆ ನೂಕುನುಗ್ಗಲು ಆಗುತ್ತಿದೆ. ಇದರ ನಿವಾರಣೆಗೆ ಹೊಸದಾಗಿ ಮಾರ್ಗ ಬದಲಾವಣೆಗೆ ದ್ವಾರ ತೆರೆಯಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
Post a comment
Log in to write reviews