ನ್ಯೂಯಾರ್ಕ್: ಮೆಲ್ವಿಲ್ಲೆನಲ್ಲಿರುವ ಬಾಪ್ಸ್ ಶ್ರೀ ಸ್ವಾಮಿ ನಾರಾಯಣ ಮಂದಿರದ ಮೇಲೆ ಕಿಡಿಗೇಡಿಗಳು ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಇಂಡಿಯನ್ಸ್ ಆಕ್ರೋಶ ವ್ಯಕ್ತಪಡಿಸಿದ್ದು, ನ್ಯೂಯಾರ್ಕ್ ಇದೊಂದು ಅತ್ಯಂತ ಹೀನವಾದ ಕೃತ್ಯ. ಬಾಪ್ಸ್ ಶ್ರೀಸ್ವಾಮಿ ನಾರಾಯಣ ಮಂದಿರ ಧ್ವಂಸವನ್ನು ಯಾರೂ ಕೂಡ ಒಪ್ಪಲಾರರು. ಹಿಂದೂ ಸಮುದಾಯದೊಂದಿಗೆ ಇಂಡಿಯನ್ ನ್ಯೂಯಾರ್ಕ್ ಈಗಾಗಲೇ ಸಂಪರ್ಕವನ್ನು ಹೊಂದಿದೆ. ನಡೆದ ದುರ್ಘಟನೆಯನ್ನು ಅಮೆರಿಕಾದ ಕಾನೂನು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ನ್ಯೂಯಾರ್ಕ್ನಲ್ಲಿ ಬಾಪ್ಸ್ ಶ್ರಿಸ್ವಾಮಿ ನಾರಾಯಣ ಮಂದಿರ ಧ್ವಂಸವನ್ನು ಇಡೀ ಅಮೆರಿಕಾದಲ್ಲಿರುವ ಹಿಂದೂಗಳು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ಹಿಂದೂ ಅಮೆರಿಕನ್ ಫೌಂಡೇಶನ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು. ಟ್ವೀಟ್ನಲ್ಲಿ ಬಾಪ್ಸ್ ಶ್ರೀ ಸ್ವಾಮಿ ನಾರಾಯಣ ಮಂದಿರದ ಗೋಡೆ ಹಾಗೂ ರಸ್ತೆಯ ಮೇಲೆ ಕಿಡಿಗೇಡಿಗಳು ಬರೆದ ಭಾರತೀಯ ವಿರೋಧಿ ಬರಹಗಳ ವಿಡಿಯೋವನ್ನು ಪೋಸ್ಟ್ ಮಾಡಿದೆ.
ಕೆಲವು ದಿನಗಳ ಹಿಂದಷ್ಟೇ ಖಲಿಸ್ತಾನ್ ಉಗ್ರ ಗುರುಪಂತ್ವ ಸಿಂಗ್ ಪನ್ನು ಹಿಂದೂ ದೇವಾಲಯ ಹಾಗೂ ಸಂಸ್ಥೆಗಳಿಗೆ ಇರುವ ಬೆದರಿಕೆಯ ವಿಡಿಯೋಗಳನ್ನು ಹಂಚಿಕೊಂಡಿದ್ದ. ಸದ್ಯ ನ್ಯೂಯಾರ್ಕ್ನಲ್ಲಿ ಸ್ವಾಮಿ ನಾರಾಯಣ ದೇವಾಲಯದ ಮೇಲೆ ನಡೆದ ದಾಳಿಯೂ ಕೂಡ ಕ್ಯಾಲಿಫೋರ್ನಿಯಾ ಹಾಗೂ ಕೆನಡಾದಲ್ಲಿ ನಡೆದ ಮಾದರಿಯಲ್ಲಿಯೇ ನಡೆದಿದೆ. ಇದರ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡವಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Post a comment
Log in to write reviews