ಎಲ್ಲೆಡೆ ಮಳೆಯಿಂದಾಗಿ ರೈತರ ಲಕ್ಷಾಂತರ ರೂ ಮೌಲ್ಯದ ಬೆಳೆ ಹಾನಿಯಾಗಿದ್ದರೂ ಒಬ್ಬ ಸಚಿವ ಸಹ ಬೆಳೆ ಹಾನಿ ಪ್ರದೇಶಕ್ಕೆ ಹೋಗಿಲ್ಲ ಎಂದು ಮಾಜಿ ಸಿ ಎಂ ಕುಮಾರ್ ಸ್ವಾಮಿ ಸಚಿವರ ವಿರುದ್ದ ಕಿಡಿಕಾರಿದರು. ಈ ಕುರಿತಾಗಿ ಇಂದು ಮೈಸೂರಿನಲ್ಲಿ ಮಾತನಾಡಿದ ಕುಮಾರ ಸ್ವಾಮಿ ಈ ವರ್ಷ ರಾಜ್ಯದಲ್ಲಿ ಮಳೆ ಉತ್ತಮ ರೀತಿಯಲ್ಲಿ ಪ್ರಾರಂಭವಾಗಿದೆ. ಎರಡು ವಾರದಿಂದ ಮಳೆಯಿಂದಾಗಿ ರೈತರಿಗೆ ಅಪಾರ ಪ್ರಮಾಣದ ಹಾನಿ ಆಗಿದೆ. ಪಿರಿಯಾಪಟ್ಟಣ ಭಾಗದಲ್ಲಿ ತಂಬಾಕು, ಶುಂಠಿ ಹಾನಿ ಆಗಿದ್ದು, ತುಮಕೂರಿನಲ್ಲಿ ಒಬ್ಬ ರೈತನ 2000 ಅಡಿಕೆ ಮರಗಳು ಬಿದ್ದು ಹೋಗಿವೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಜವಾಬ್ದಾರಿ ಇದ್ದರೆ ಕೂಡಲೇ ಇತ್ತ ಗಮನ ಹರಿಸಬೇಕಿತ್ತು. ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಅಂತ ಎಸಿ ರೂಮ್‌ನಲ್ಲಿ ಕುಳಿತುಕೊಂಡರೆ ಆಗಲ್ಲ. ಸರ್ಕಾರ ಕೂಡಲೇ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕು. ಸರ್ಕಾರ ಈ ಬಾರಿ ಬರವನ್ನು ಸರಿಯಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರ ಕಳೆದ ವರ್ಷ ಬರ ಪರಿಹಾರ ಕೊಡದೇ ಆ ಆಪಾದನೆಯನ್ನು ಕೇಂದ್ರ ಸರ್ಕಾರದ ಮೇಲೆ ಹಾಕಿತ್ತು. ಈಗಲೂ ಅದೇ ರೀತಿ ಕೇಂದ್ರದ ಮೇಲೆ ಹೇಳುತ್ತಾರೆ ಅನ್ನಿಸುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Post a comment
Log in to write reviews