ಭಾರತ
ʻನೋ.. ನೋ.. ನಾನ್ ರಕ್ತ ಕೊಡಲ್ಲʼ
ಉತ್ತರ ಪ್ರದೇಶ: ರಕ್ತದಾನ ಮಹಾದಾನ. ರೋಗಿಯೊಬ್ಬರಿಗೆ ರಕ್ತ ನೀಡಿದ್ರೆ ಮನಸ್ಸಿಗೆ ಏನೋ ಸಮಾಧಾನ.ರಕ್ತದಾನದಂತ ಸಮಾಜಮುಖಿ ಅಂಶ ಅಳವಡಿಸಿಕೊಂಡ್ರೆ ಜೀವನ ಪಾವನ. ಹೌದು..
ʻಒಬ್ಬರ ಜೀವ ಉಳಿಯುತ್ತೆ ಅಂದ್ರೆ ನಾನ್ಯಾಕೆ ರಕ್ತ ಕೊಡಬಾರ್ದುʼ ಅಂತಾ ಹಲವರು ಮುಂದೆ ಬರ್ತಾರೆ.
ರಕ್ತ ಕೊಟ್ಟು ರೋಗಿ ಪ್ರಾಣ ಉಳಿಸ್ತಾರೆ.
ರಕ್ತದಾನ ಶಿಬಿರ ಹಮ್ಮಿಕೊಂಡು ಸೋಷಿಯಲ್ ಸರ್ವೀಸ್‌ಗೂ ಕೆಲವರು ಮುಂದಾಗ್ತಾರೆ.
ಆದ್ರೆ ಇಲ್ಲೊಬ್ಬ ಬಿಜೆಪಿ ಮೇಯರ್ ರಕ್ತದಾನ ಶಿಬಿರದಲ್ಲಿ ʻರಕ್ತ ನೀಡ್ತಿದ್ದೇನೆʼ ಅನ್ನೋ ಥರ
ಫೋಟೋಶೂಟ್‌ಗೆ ಫೋಸ್ ಕೊಟ್ಟು ನೆಟ್ಟಿಗರಿಂದ ನಗೆಪಾಟಲಿಗೀಡಾಗಿದ್ದಾನೆ.ಪಿಎಂ ನರೇಂದ್ರ ಮೋದಿ ಬರ್ತ್‌ಡೇ ಪ್ರಯುಕ್ತ ಸೆಪ್ಟೆಂಬರ್ 17 ರಂದು ದೇಶದ ವಿವಿಧೆಡೆ ಬಿಜೆಪಿ ರಕ್ತದಾನ ಶಿಬಿರ ಹಮ್ಮಿಕೊಂಡಿತ್ತು.
ಅದರಂತೆ ಉತ್ತರಪ್ರದೇಶದ ಮೊರಾದಾಬಾದ್ ಬಿಜೆಪಿ ಕಚೇರಿಯಲ್ಲೂ ರಕ್ತದಾನ ಶಿಬಿರ ಆಯೋಜನೆ ಮಾಡ್ಲಾಗಿತ್ತು.ಈ ವೇಳೆ ಅಲ್ಲಿಗೆ ಬಂದ ಮೊರದಾಬಾದ್ ಮೇಯರ್ ವಿನೋದ್ ಅಗರ್ವಾಲ್ ʻರಕ್ತ ಕೊಡ್ತೇನೆʼಅನ್ನೋ ಥರ ಹಾಸಿಗೆ ಮಲಗಿದ್ದಾರೆ. ಆಗ ವಿನೋದ್ ಅವರ ಬಿಪಿ ಚೆಕ್ ಮಾಡಿದ ವೈದ್ಯಕೀಯ ಸಿಬ್ಬಂದಿ ರಕ್ತ ಪಡೆಯಲು ಮುಂದಾಗಿದ್ದಾರೆ.
ತಕ್ಷಣ ಎದ್ದು ಕುಳಿತ ಮೇಯರ್ ವಿನೋದ್ ಅಗರ್ವಾಲ್ ಹಲ್ಲು ಕಿಸಿಯುತ್ತ ʻನೋ.. ನೋ.. ನಾನ್ ರಕ್ತ ಕೊಡಲ್ಲʼ ಅಂತಾ ಅಲ್ಲಿಂದ ಸ್ಮೂತ್ ಆಗಿ ಎಸ್ಕೇಪ್ ಆಗಿದ್ದಾರೆ. ಮೇಯರ್ ವರ್ತನೆ ಕಂಡ ವೈದ್ಯಕೀಯ ಸಿಬ್ಬಂದಿ ಕ್ಷಣ ಕಾಲ ಗಲಿಬಿಲಿಗೆ ಒಳಗಾಗಿದ್ರು.
ʻಏನಪ್ಪ.. ಮೇಯರ್ ಸಾಹೇಬ್ರು ಕ್ಯಾಮೆರಾಗೆ ಫೋಸ್ ಕೊಡೋಕೆ ಬೆಡ್ ಮೇಲೆ ಮಲಗಿದ್ರಾ..?ʼ
ಅಂತಾ ಮೆಡಿಕಲ್ ಸ್ಟಾಫ್‌ಗೆ ಅರ್ಥ ಆಗೋವಷ್ಟರಲ್ಲಿ ಮೇಯರ್ ಸರ್ ಅಲ್ಲಿಂದ ಕಾಲ್ಕಿತ್ತಿದ್ರು.
ಮೇಯರ್ ವಿನೋದ್ ಅವರ ರಕ್ತದಾನದ ವಿಡಿಯೋ ವೈರಲ್ ಆಗ್ತಿದ್ದಂತೆ ಸ್ಪಷನೆ ಕೊಟ್ಟಿದ್ದಾರೆ.
ʻನಾನು ಮಧುಮೇಹಿ ರೋಗಿ. ಹೃದ್ರೋಗಿ ಕೂಡ. ಹಾಗಾಗಿ ರಕ್ತದಾನ ಮಾಡಲು ಸಾಧ್ಯವಿಲ್ಲ.’
ಅಂತ ತಿಳಿಸಿದ್ದಾರೆ. ಮೇಯರ್ ವಿನೋದ್ ಅವರ ರಕ್ತದಾನದ ಡ್ರಾಮಾ ನೋಡಿದ ನೆಟ್ಟಿಗರು ಗೇಲಿ ಮಾಡಿದ್ದಾರೆ.ʻಈ ಡ್ರಾಮಾ ಎಲ್ಲಾ ಯಾಕ್ ಬೇಕಿತ್ತುʼ ಅಂತಾ ಕಾಲೆಳೆದಿದ್ದಾರೆ.
Post a comment
Log in to write reviews