ಅಶ್ಲೀಲ ಸಿ.ಡಿ. ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ನಾಳೆ SIT ಮುಂದೆ ಹಾಜರಾಗ್ತಾರೋ ಇಲ್ಲವೋ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಬಹಳವಾಗಿ ಹರಿದಾಡುತ್ತಿದೆ. ದೇವೇಗೌಡರ ಕುಟುಂಬ ಜೋತಿಷ್ಯ, ಸಂಖ್ಯೆ ಶಾಸ್ತ್ರದಲ್ಲಿ, ಅಪಾರ ನಂಬಿಕೆ. ಹಾಗೂ ದೇವರ ಅನುಗ್ರಹ ಇಲ್ಲದೆ ಯಾವ ಕಾರ್ಯವನ್ನೂ ಮಾಡುವುದಿಲ್ಲ. ದೇವೆಗೌಡರು ಶೃಂಗೇರಿ ಶಾರದಾಂಬೆಯ ಸೂಚನೆಯಿಲ್ಲದೆ, ರೇವಣ್ಣ ನಿಂಬೆ ಹಣ್ಣಿಲ್ಲದೆ ಮನೆಯ ಹೊಸಿಲು ಕೂಡ ದಾಟುವುದಿಲ್ಲ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ಹಾಗೆ ಸಂಖ್ಯಾ ಶಾಸ್ತ್ರದಲ್ಲಿಯೂ ಗೌಡರ ಕುಟುಂಬಕ್ಕೆ ಅಪಾರ ನಂಬಿಕೆ. ರೇವಣ್ಣರವರೇ ಜ್ಯೋತಿಷಿ ಹಾಗೂ ಸಂಖ್ಯೆ ಶಾಸ್ತ್ರಜ್ಞರ ಆದೇಶಂದಂತೆ ತಮ್ಮ ಮಗನಾದ 31 ರಂದು ಪ್ರಜ್ವಲ್‌ಗೆ SIT ಹಾಜರಾಗಲು ಮಾಹಿತಿ ಕಳುಹಿಸಿರಬಹುದೆಂಬ ಮಾತುಗಳು ಹರಿದಾಡುತ್ತಿದೆ.
ಆದರೆ, ಇಲ್ಲಿ ಗಮನಿಸಬಹುದಾದ ಅಂಶವೇನೆಂದರೆ ಸಂಖ್ಯೆ ಎಂಟು ಗೌಡರ ಕುಟುಂಬಕ್ಕೆ ಅಪಾರ ಹಿನ್ನಡೆಯನ್ನ ಕೊಟ್ಟಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಗೌಡರ ಕುಟುಂಬಕ್ಕೆನಾಮ ಪತ್ರ ಸಲ್ಲಿಕೆಯಿಂದ ಹಿಡಿದು ಯಾವುದೇ ಶುಭಕಾರ್ಯಕ್ಕೆ ಎಂಟರ ಗಂಟು ಯಾವತ್ತೂ ಹಿನ್ನಡೆಯನ್ನೇ ತಂದಿದೆ ಎಂದು ಮೂಲವೊಂದು ಹೇಳ್ಳುತ್ತಿದೆ. ಈಗ ನಾಳೆ ಪ್ರಜ್ವಲ್ ರೇವಣ್ಣ ಬೆಂಗಳೂರಿನ CID ಯವರ ಮುಂದೆ ಹಜರಾಗಲು ಆರಿಸಿ ಕೊಂಡಿದ್ದು 31ನೇ ತಾರೀಕು.
ಸಮಸ್ಯೆ ಇರುವುದೇ ಇಲ್ಲಿ ನಾಳೆ ಎಂದರೆ 31/05/2024 ಇದನ್ನ ಕೂಡಿಸಿದರೆ ಬರುವ ಸಂಖ್ಯೆ 08. ಎಂಟರ ಸಂಖ್ಯೆಯಿಂದ ಈ ಪೆನ್ಡ್ರೈವ್ ವಿಚಾರದಲ್ಲಿ ತೊಂದರೆ ಆಗಬಹುದು ಎಂದು ರೇವಣ್ಣ ಕುಟುಂಬಕ್ಕೆ ರಾಜ ಜ್ಯೋತಿಷ್ಯರೊಬ್ಬರು ಹೇಳಿದ್ದಾರೆ ಎನ್ನಲಾಗದೆ. ಎಂಟು ಬದಲು ಬೇರೊಂದು ದಿನದಂದು ಶರಣಾಗುವುದರಿಂದ ಈ ಹಗರಣದಿಂದ ಅಷ್ಟೇನು ತೊಂದರೆಯಾಗದು ಎಂದು ಖ್ಯಾತ ಜ್ಯೋತಿಷ್ಯರು ತಿಳಿಸಿದ್ದಾರೆ. ಇದೇ ಕಾರಣದಿಂದ ನಾಳೆ ಪ್ರಜ್ವಲ್ ಶರಣಾಗುವುದು ಅನುಮಾನ ಎನ್ನಲಾಗಿದೆ. ಈ ಹಿಂದೆ ಕುಮಾರಸ್ವಾಮಿಯವರು ಮೊದಲಬಾರಿ ಅಧಿಕಾರ ಕಳೆದುಕೊಳ್ಳಲು ಕಾರಣವಾದ ದಿನಕೂಡ 2008. ಹಾಗೇ ಕಾಂಗ್ರೇಸ್ ಜಡಿಎಸ್ ಸಂಮಿಶ್ರದಲ್ಲಿ ವಿಶ್ವಾಸ ಮತ ಯಾಚನೆಯಲ್ಲಿ ಸೋಲು ಕಂಡಿದ್ದು ಕೂಡ 2018ರಲ್ಲಿ ಎಂಬುದು ಗಮನಾರ್ಹ. ಇದನ್ನ ಗಮನಿಸಿ ನೋಡಿದರೆ ಪ್ರಜ್ವಲ್ಗಾಗಿ ಕಾಯುತ್ತ ಕುಳಿತಿರುವ CID ಅಧಿಕಾರಿಗಳಿಗೆ ನಿರಾಸೆ ಕಾದಿದೆ ಎಂಬ ಚರ್ಚೆಯೊಂದು ಜೋರಾಗಿ ನಡೆಯುತ್ತಿದೆ.
ರಾಜೇಶ್ವರಿ ಹೂಗಾರ್ ಡಿಜಿಟಲ್ ಸಮಯ ನ್ಯೂಸ್
Post a comment
Log in to write reviews