ತುಮಕೂರು : ಶುಕ್ರವಾರ (ಜೂನ್ 7) ಸುರಿದ ಭಾರಿ ಮಳೆಗೆ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಥರಟಿ ಗ್ರಾಮದ ಕೆರೆಯಲ್ಲಿ ದಂಡೆ ಬಿರುಕು ಬಿದ್ದಿದ್ದು ಭಾರಿ ಪ್ರಮಾಣದ ನೀರು ಪೊಲಾಗಿದೆ. ಈ ಕೆರೆಗೆ 100 ವರ್ಷ ಇತಿಹಾಸವಿದ್ದು ಅಧಿಕಾರಿಗಳು ಹಾಗೂ ಗ್ರಾಮದ ಸಾರ್ವಜನಿರ ಸಹಕಾರದಿಂದ ಕೆರೆಯ ಏರಿಯ ಬಿರುಕನ್ನು ಮುಚ್ಚುವ ಕಾರ್ಯ ನಡೆಸಲಾಗಿದೆ.
ಕೆರೆಯಲ್ಲಿ ಬಿರುಕು ಬಿದ್ದ ಹಿನ್ನಲೆಯಲ್ಲಿ ಸಾರ್ವಜನಿಕರು ಗ್ರಾಪಂ ಪಿಡಿಒ ರಂಗನರಸಯ್ಯ ರವರಿಗೆ ಕರೆ ಮಾಡಿದ್ದು ಅಧಿಕಾರಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಸಮ್ಮುಖದಲ್ಲಿ ಸ್ಥಳಕ್ಕೆ ದಾವಿಸಿದ್ದು ಕೆರೆ ಬಿರುಕು ಮುಚ್ಚುವ ಕಾರ್ಯದಲ್ಲಿ ಥರಟಿ ಗ್ರಾಮಸ್ಥರಿಗೆ ನೆರವಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ತಹಶೀಲ್ದಾರ್ ಮಂಜುನಾಥ್, ಇಒ ಅಪೂರ್ವ. ಎಇಇ ಕೀರ್ತಿ ನಾಯ್ಕ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Post a comment
Log in to write reviews