ದುಬೈ: ಒಮಾನ್ ಕರಾವಳಿಯಲ್ಲಿ ತೈಲ ಪೂರೈಕೆ ಹಡಗು ಮುಳುಗಿ 13 ಭಾರತೀಯರು ಸೇರಿದಂತೆ ಒಟ್ಟು 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ.
ದುಬೈನ ಹಮ್ರಿಯಾ ಬಂದರಿನಿಂದ ಯೆಮೆನ್ ಬಂದರು ನಗರಿ ಏಡೆನ್‌ಗೆ ಹೊರಟಿದ್ದ ಹಡಗು ಒಮಾನ್ ಕರಾವಳಿಯ ಡುಕ್ಮ್‌ನ ವಿಲಾಯತ್‌ನಲ್ಲಿ ಸೋಮವಾರ (ಜುಲೈ 15)ರಂದು ಹಡಗು ಮಗುಚಿ ಬಿದ್ದು ಈ ಅನಾಹುತ ಸಂಭವಿಸಿದೆ. ಹಡಗು ಕೊಮೊರೊಸ್ ದೇಶದ ಧ್ವಜ ಹೊಂದಿದೆ ಎಂದು ಒಮಾನ್ ಕಡಲ ಪ್ರಾಧಿಕಾರ ತಿಳಿಸಿದೆ.
ಇಲ್ಲಿನ ರಾಸ್ ಮದ್ರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲಿ ದೂರದಲ್ಲಿ 'ಪ್ರೆಸ್ಟೀಜ್ ಫಾಲ್ಕನ್' ಹೆಸರಿನ ಹಡಗು ಮುಳುಗಿದೆ. ಇದರಲ್ಲಿ ಮೂವರು ಶ್ರೀಲಂಕಾದವರೂ ಇದ್ದರು ಎನ್ನಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಒಮಾನ್‌ನ ಕಡಲ ಭದ್ರತಾ ಕೇಂದ್ರ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ದುಬೈನ ಹಮ್ರಿಯಾ ಬಂದರಿನಿಂದ ಹೊರಟಿದ್ದ ಹಡಗು ಯೆಮೆನ್ ಬಂದರು ನಗರಿ ಏಡೆನ್‌ಗೆ ಹೋಗುತ್ತಿತ್ತು ಎಂದು ಶಿಪ್ಪಿಂಗ್ ವೆಬ್‌ಸೈಟ್ (marinetraffic.com)ನಲ್ಲಿ ಉಲ್ಲೇಖಿಸಲಾಗಿದೆ. ಡುಕ್ಮ್ ಬಂದರು ಒಮಾನ್‌ನ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳ ಪ್ರಮುಖ ಕೇಂದ್ರವಾಗಿದೆ.
Post a comment
Log in to write reviews