ಇನ್ನು ಮುಂದೆ ವಿಧಾನಸೌಧ ಪ್ರವೇಶಕ್ಕೆ ಪಾಸ್‌ಗಳನ್ನು ಆನ್‌ಲೈನ್ ಮೂಲಕವೇ ವಿತರಿಸಲಿದೆ. ಕ್ಯುಆರ್ ಕೋಡ್ ಮೂಲಕ ಪಾಸ್‌ಗಳನ್ನು ದೃಢೀಕರಿಸಿಕೊಂಡು ಪ್ರವೇಶ ಕಲ್ಪಿಸಲು ಸರಕಾರ ನಿರ್ಧರಿಸಿದೆ. ಗೃಹ ಸಚಿವ ಡಾ| ಪರಮೇಶ್ವರ ಈ ಹೊಸ ನಿಯಮ ಜಾರಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಧಾನಸೌಧದ ಪ್ರವೇಶದ್ವಾರಗಳಲ್ಲಿ ಹೊಸದಾಗಿ ಅಳವಡಿಸಿರುವ ಮೆಟಲ್ ಡಿಟೆಕ್ಟರ್, ಬ್ಯಾಗ್ ಸ್ಕ್ಯಾನರ್‌ಗಳನ್ನು ಶುಕ್ರವಾರ ಪರಿಶೀಲಿಸಿ ಅವರು ಈ ವಿಷಯ ತಿಳಿಸಿದರು.
ಆನ್‌ಲೈನ್ ಮೂಲಕ ಪಡೆದ ಕ್ಯುಆರ್ ಕೋಡ್ ಪಾಸ್‌ಗಳನ್ನು ಪರಿಶೀಲಿಸಲಾಗುತ್ತದೆ. ಗುಣ ಮಟ್ಟದ ಉಪಕರಣ ಅಳವಡಿಸಿರುವುದರಿಂದ, ಅನುಮಾನಾಸ್ಪದ ವಸ್ತುಗಳನ್ನು ತೆಗೆದು ಕೊಂಡು ಬಂದರೆ, ಪತ್ತೆಹಚ್ಚಲು ಸುಲಭವಾಗುತ್ತದೆ ಎಂದರು.
ವಿಧಾನಸೌಧದ ಭದ್ರತೆಯಲ್ಲಿ ಮತ್ತಷ್ಟು ಮಾರ್ಪಾಡು ತರಲಾಗುವುದು ಎಂದು ಮಾಹಿತಿ ನೀಡಿದ ಗೃಹ ಸಚಿವರು, ಸಾರ್ವಜನಿಕರು ಪೂರ್ವ ಭಾಗದ ಗೇಟಿನಿಂದ ಬರಬೇಕು. ಪಶ್ಚಿಮ ದ್ವಾರದಿಂದ ಗಣ್ಯರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಧಾನಸೌಧಕ್ಕೆ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂಬ ವಿಷಯವಾಗಿ ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಲಾಗಿದೆ ಎಂದರು.
Post a comment
Log in to write reviews