ಮೈಸೂರು: ಮೃಗಾಲಯ ಅಭಿವೃದ್ಧಿ ಪಡಿಸಿ ವಿಶ್ವ ಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರು ಸರತಿಯಲ್ಲಿ ನಿಂತು ಕಿರಿ ಕಿರಿ ಅನುಭವಿಸುತ್ತಿದ್ದರು. ಹೀಗಾಗಿ ವಾಟ್ಸಾಪ್ ಆನ್ ಲೈನ್ ಟಿಕೆಟ್ ಉದ್ಘಾಟನೆ ಮಾಡಿದ್ದೇವೆ. ಪ್ರವಾಸಿಗರು ಮೊಬೈಲ್ ವಾಟ್ಸಾಪ್ ಮೂಲಕ ಟಿಕೆಟ್ ಪಡೆಯಬಹುದು. ಲೈವ್ ಫೀಡ್ ಕೂಡ ಉದ್ಘಾಟನೆ ಮಾಡಿದ್ದೇವೆಂದರು. ಮೃಗಾಲಯದಲ್ಲಿನ ಹಾವುಗಳಿಗೆ ಹೊರಗಿನಿಂದ ಆಹಾರ ತರಲಾಗುತ್ತಿತ್ತು. ಈಗ ನಮ್ಮಲ್ಲಿಯೇ ಮೊಲ, ಇಲಿ ಸಂತತಿ ಹೆಚ್ಚಳಕ್ಕೆ ಮುಂದಾಗಿದ್ದೇವೆ. ಇದರ ಜೊತೆ ಮೃಗಾಲಯದ ಅಭಿವೃದ್ಧಿಗೂ ನಾವು ಸಿದ್ದರಿದ್ದೇವೆಂದರು.
ವಿದ್ಯುತ್ ತುಳಿದು ಆನೆಗಳು ಸಾವನ್ನಪ್ಪುತ್ತಿರುವುದು ದುಃಖದ ಸಂಗತಿ. ಈಗಾಗಲೇ ಆನೆಗಳ ಸಾವಿನ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಈ ರೀತಿಯಾದ ಘಟನೆಗಳು ಮತ್ತೆ ಮರುಕಳಿಸದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದರು.
Post a comment
Log in to write reviews