ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ಸುಮಾರು 100 ಕ್ಕೂ ಹೆಚ್ಚು ಮರಗಳು ಮುರಿದು ಬಿದ್ದು, ಅವಘಡ ಸೃಷ್ಟಿಸಿದೆ. ಸುಮಾರು 10 ಕ್ಕೂ ಹೆಚ್ಚು ಕಡೆ ಮನೆಗಳ ಮೇಲೆ ಮರಗಳು ಬಿದ್ದಿದ್ದು, ಆ ಮನೆಯಲ್ಲಿಯೇ ಹಲವು ಮಂದಿ ಸಿಲುಕಿಕೊಂಡು ಪರದಾಡುವ ಸ್ಥಿತಿ ಎದುರಾಗಿತ್ತು. ತಡರಾತ್ರಿಯಲ್ಲಿ ಶಾಸಕ ಕೆ, ಗೋಪಾಲಯ್ಯ ಅಧಿಕಾರಿಗಳ ಜೊತೆ ಸಂಚರಿಸಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದರು.
10ಕ್ಕೂ ಹೆಚ್ಚು ಕಡೆ ಮನೆಗಳ ಮೇಲೆ ಮರ ಬಿದ್ದದ್ದರಿಂದ ಅಂತಹ ಮನೆಯಲ್ಲಿ ಸಿಲುಕಿದ್ದವರನ್ನು ಹೊರಗೆ ಕರೆತರುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದರು. ಮಹಾಲಕ್ಷ್ಮೀ ಲೇಔಟ್‌ನ ಕರ್ನಾಟಕ ಲೇಔಟ್, ಬೆಮೆಲ್ ಲೇಔಟ್, ಕಿರ್ಲೋಸ್ಕರ್ ಕಾಲೋನಿ , ಕುರುಬರಹಳ್ಳಿ ಮುಖ್ಯ ರಸ್ತೆ, ಕಮಲಾ ನಗರದ ವಾಟರ್ ಟ್ಯಾಂಕ್ ಮುಖ್ಯ ರಸ್ತೆ ಮೊದಲಾದ ಕಡೆ ಹಲವು ಮರಗಳು ಉರುಳಿ ಬಿದ್ದಿದ್ದು, ಸೋಮವಾರ ಬೆಳಿಗ್ಗೆಯಿಂದ ತೆರವು ಕಾರ್ಯ ತೀವ್ರಗತಿಯಲ್ಲಿ ನಡೆದಿದೆ.
ಈ ಸಂಬಂಧ ಶಾಸಕ ಗೋಪಾಲಯ್ಯ ಮಾತನಾಡಿ, ಮರಗಳ ತೆರವು ಕಾರ್ಯ ಮಾಡುವ ಸಿಬ್ಬಂದಿಯ ಕೊರತೆ ಇದ್ದು, ಮತ್ತಷ್ಟು ಸಿಬ್ಬಂದಿಯನ್ನು ಬಿಬಿಎಂಪಿ ಬಳಸಿಕೊಳ್ಳಬೇಕು. ಈ ಸಮಸ್ಯೆ ಸಂಬಂಧ ಆದಷ್ಟು ಬೇಗ ಸಿಎಂ ಸಿದ್ದರಾಮಯ್ಯನವರು, ಮಳೆ ಹಾನಿಗೊಳಗಾದ ಸಂತ್ರಸ್ಥರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
Post a comment
Log in to write reviews