ನವದೆಹಲಿ : ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್‌ಲೈನ್ಸ್‌ನಲ್ಲಿ ಗಗನಸಖಿಯೊಬ್ಬಳು ಸಾಕ್ಸ್‌ನೊಳಗೆ ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾಳೆ.
ಲಾಹೋರ್‌ನ ಅಲ್ಲಮಾ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು, ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಮತ್ತು ಇಮಿಗ್ರೇಶನ್ ಆಥೋರಿಟಿಯ ಸಹಯೋಗದೊಂದಿಗೆ ಗಗನಸಖಿಯೊಬ್ಬಳ ಕಾಲಿನಲ್ಲಿರುವ ಸಾಕ್ಸ್ ಅನ್ನು ಪರಿಶೀಲನೆ ನಡೆಸಲಾಯಿತು. ಆ ವೇಳೆ ಆಕೆಯ ಕಾಲಿನ ಸಾಕ್ಸ್ ನಲ್ಲಿ ಹಲವು ವಿದೇಶಿ ಕರೆನ್ಸಿಯನ್ನು ಪತ್ತೆಯಾಗಿದೆ. ಹಾಗಾಗಿ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಮಾಹಿತಿ ಪ್ರಕಾರ, ಕಸ್ಟಮ್ಸ್ ಅಧಿಕಾರಿಗಳು ಗಗನಸಖಿಯ ಬ್ಯಾಗ್‍ನಲ್ಲಿ 37,318 ಡಾಲರ್ ಸುಮಾರು 3,124,356 ಭಾರತೀಯ ರೂಪಾಯಿಗಳು ಮತ್ತು 40,000 ಸೌದಿ ರಿಯಾಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 892,653 ಭಾರತೀಯ ರೂಪಾಯಿಗಳಾಗಿವೆ ಎನ್ನಲಾಗಿದೆ.
ಗನಸಖಿ ಜೆಡ್ಡಾಗೆ ಹೋಗಲು ಪಿಐಎ ವಿಮಾನವನ್ನು ಹತ್ತಬೇಕಾಗಿತ್ತು. ಆಗ ಅಧಿಕಾರಿಗಳು ಆಕೆಯ ಮೇಲೆ ಅನುಮಾನಗೊಂಡು ಅವಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಆಕೆ ಈಗಾಗಲೇ ಬಚ್ಚಿಟ್ಟ ಪಾಕಿಸ್ತಾನಿ ರೂಪಾಯಿಗಳ ಹಲವಾರು ಲಕ್ಷ ರೂಪಾಯಿಗಳ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಕಲೆಕ್ಟರ್ ಕಸ್ಟಮ್ಸ್ ರಾಜಾ ಬಿಲಾಲ್ ಗಗನಸಖಿಯನ್ನು ಬಂಧಿಸಿರುವುದಾಗಿ ದೃಢಪಡಿಸಿದ್ದಾರೆ ಮತ್ತು ಕರೆನ್ಸಿ ಕಳ್ಳಸಾಗಣೆಯನ್ನು ತಡೆಗಟ್ಟುವ ಬಗ್ಗೆ ಸರ್ಕಾರ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಗಗನಸಖಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕ್ಕಾಗಿ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.
Post a comment
Log in to write reviews