Samayanews.

Samayanews.

2024-12-24 12:26:55

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪ್ಯಾರಿಸ್ ಒಲಿಂಪಿಕ್ಸ್: ಭಾರತದ 117 ಕ್ರೀಡಾಪಟುಗಳು, 140 ಸಿಬ್ಬಂದಿಯ ಪಟ್ಟಿ ಬಿಡುಗಡೆ

ನವದೆಹಲಿ: ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು 117 ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ. ಕೇಂದ್ರ ಕ್ರೀಡಾ ಸಚಿವಾಲಯ ಕ್ರೀಡಾಪಟುಗಳು ಜೊತೆಗೆ 140 ಸಹಾಯಕ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಒಳಗೊಂಡಿರುವ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಸ್ಪರ್ಧಾಳುಗಳ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚುವರಿಯಾಗಿ 72 ಜನರ ಪ್ರಯಾಣಕ್ಕೆ ಸರ್ಕಾರದ ವೆಚ್ಚದಲ್ಲಿ ಅನುಮೋದನೆ ನೀಡಲಾಗಿದೆ.
''2024ರ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಪ್ಯಾರಿಸ್ ಸಂಘಟನಾ ಸಮಿತಿಯ ಮಾನದಂಡಗಳ ಪ್ರಕಾರ ಕ್ರೀಡಾ ಗ್ರಾಮದಲ್ಲಿ ಉಳಿಯಲು ಅನುಮತಿಸುವ ಸಿಬ್ಬಂದಿ ಮಿತಿ 67. ಇದರಲ್ಲಿ ವೈದ್ಯಕೀಯ ತಂಡದ ಐವರು ಸದಸ್ಯರು ಒಳಗೊಂಡಂತೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ 11 ಅಧಿಕಾರಿಗಳು ಸೇರಿದ್ದಾರೆ'' ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಅವರಿಗೆ ಸಚಿವಾಲಯ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
''ಕ್ರೀಡಾಪಟುಗಳ ಅಗತ್ಯತೆಗಳನ್ನು ಪೂರೈಸಲು, ಹೆಚ್ಚುವರಿ ತರಬೇತುದಾರರು ಮತ್ತು ಇತರ ಸಹಾಯಕ ಸಿಬ್ಬಂದಿ ಸೇರಿ 72 ಜನರಿಗೆ ಸರ್ಕಾರದ ವೆಚ್ಚದಲ್ಲಿ ಅನುಮೋದಿಸಲಾಗಿದೆ. ವಾಸ್ತವ್ಯಕ್ಕಾಗಿ ಕ್ರೀಡಾ ಗ್ರಾಮದ ಹೊರಗಿನ ಹೋಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕ್ರೀಡಾಪಟುಗಳ ವಿವರ: ಪ್ಯಾರಿಸ್ ಒಲಿಂಪಿಕ್ಸ್‌ಗೆ ತೆರಳುತ್ತಿರುವವರಲ್ಲಿ ಅಥ್ಲೀಟ್ಗಳ ಸಂಖ್ಯೆಯೇ ಹೆಚ್ಚು. 11 ಮಹಿಳೆಯರು ಮತ್ತು 18 ಪುರುಷರು ಸೇರಿ 29 ಅಥ್ಲೀಟ್ಗಳಿದ್ದಾರೆ. ನಂತರದ ಶೂಟಿಂಗ್ (21) ಮತ್ತು ಹಾಕಿ (19), ಟೇಬಲ್ ಟೆನಿಸ್ನಲ್ಲಿ 8 ಆಟಗಾರರು ಪ್ರತಿನಿಧಿಸುತ್ತಾರೆ. ಬ್ಯಾಡ್ಮಿಂಟನ್ನಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಸೇರಿದಂತೆ ಏಳು ಸ್ಪರ್ಧಿಗಳಿದ್ದಾರೆ. ಕುಸ್ತಿ, ಬಿಲ್ಲುಗಾರಿಕೆ ಮತ್ತು ಬಾಕ್ಸಿಂಗ್ ತಲಾ ಆರು ಮಂದಿ ಪ್ರತಿನಿಧಿಸಲಿದ್ದಾರೆ. ನಂತರದಲ್ಲಿ ಗಾಲ್ಫ್ (4), ಟೆನಿಸ್ (3), ಈಜು (2), ನೌಕಾಯಾನ (2) ಮತ್ತು ರೋಯಿಂಗ್ ಮತ್ತು ವೇಟ್ ಲಿಫ್ಟಿಂಗ್, ಕುದುರೆ ಸವಾರಿ, ಜೂಡೋನಲ್ಲಿ ತಲಾ ಒಬ್ಬರು ಪ್ರತಿನಿಧಿಸಲಿದ್ದಾರೆ.

img
Author

Post a comment

No Reviews