ಉದ್ಘಾಟನೆ ಕಾಣದ ಪಾರ್ಕಿಂಗ್ ಕಾಂಪ್ಲೆಕ್ಸ್‌ಗಳು ; ಬೆಂಗಳೂರಿಗರಿಗೆ ಪಾರ್ಕಿಂಗ್ ವ್ಯವಸ್ತೆಗೆ ಸಿಗದ ಮುಕ್ತಿ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ಸವಾರರ ಗೋಳು ಕೇಳುವವರೇ ಇಲ್ಲದಂತಾಗಿದೆ. ಒಂದಡೆ ಟ್ರಾಫಿಕ್ ಕಿರಿಕಿರಿ, ಮತ್ತೊಂದಡೆ ಪಾರ್ಕಿಂಗ್ ತೊಂದರೆ (Parking Problem) ಸವಾರರನ್ನು ಒದ್ದಾಡುವಂತೆ ಮಾಡಿದೆ.
ಇತ್ತ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ಪಾರ್ಕಿಂಗ್ ಕಾಂಪ್ಲೆಕ್ಸ್‌ಗಳು (Parking Complex) ಇದ್ದರೂ ಇಲ್ಲದಂತಾಗಿವೆ.
ಫ್ರೀಡಂ ಪಾರ್ಕ್ ಬಳಿ ವಿಶಾಲವಾದ ಹೈ-ಟೆಕ್ ಸೌಲಭ್ಯಗಳಿರುವ ಕಟ್ಟಡವನ್ನು ಪಕ್ಕಾ ಪ್ಲಾನ್ ಮಾಡಿ ಕಾರು, ಬೈಕ್ ಪಾರ್ಕಿಂಗ್ ಮಾಡಲು ಬಿಬಿಎಂಪಿ ನಿರ್ಮಿಸಿದೆ. ಆದರೆ ಕಾಮಗಾರಿ ಮುಗಿದು ಒಂದೂವರೆ ವರ್ಷವಾದ್ರೂ ಈ ಪಾರ್ಕಿಂಗ್ ಕಾಂಪ್ಲೆಕ್ಸ್ ಉದ್ಘಾಟನೆಗೆ ಮುಹೂರ್ತವೇ ಕೂಡಿ ಬಂದಿಲ್ಲ.
ಹೀಗಾಗಿ ಜನ ಎಲ್ಲೆಂದರಲ್ಲಿ ಗಾಡಿ ನಿಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ತೆರಿಗೆ ಹಣದಲ್ಲಿ ಇಷ್ಟು ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡಿ ಸುಮ್ಮನೆ ಬಿಟ್ಟಿದ್ದಾರೆ. ಇದು ಹಾಳುಬಿದ್ದ ಕಟ್ಟಡವಾಗ್ತಿದೆ ಕೂಡಲೇ ಇಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಸಾಮಾಜಿಕ ಹೋರಾಟಗಾರ ರವಿ ಆಗ್ರಹಿಸಿದ್ದಾರೆ.
Tags:
- India News
- Kannada News
- parking
- bengaluru
- bangalore parking incident
- parking problems
- parking problems in india
- parking problem
- bangalore parking
- parking problem bangalore
- parking in bengaluru
- bangalore traffic parking problem funny
- bangalore
- car parking problems
- parking app problems
- solve parking problems
- parking system
- smart city parking problems
- parking problem chennai
- car parking problems in india
Post a comment
Log in to write reviews