ಬೆಂಗಳೂರು: ಔಷಧಿ ಸರಬರಾಜಿನಲ್ಲಿ ಬಾರಿ ಎಡವಟ್ಟು ಮಾಡಿದ್ದ ಪುಷ್ಕರ್ ಫಾರ್ಮ್, ಮೂಲತಃ ಶಿಮ್ಲಾದ ಔಷಧಿ ಸರಬರಾಜು ಸಂಸ್ಥೆಗೆ ಆರೋಗ್ಯ ಇಲಾಖೆ ಹಾಗೂ KSMSCL ನಿಂದ ಸಂಸ್ಥೆಗೆ ದಂಡ. ಸುಮಾರು 60 ಲಕ್ಷ ದಂಡ ವಿಧಿಸಿ ಹಾಗು ಟೆಂಡರ್ ಹಣದ 1% ದಂಡ ಪಾವತಿಸುವಂತೆ ಆದೇಶ ಹೊರಡಿಸಿದೆ. KSMSCL ದಂಡದ ಜೊತೆ ಸರಬರಾಜು ಮಾಡಿದ್ದ ಔಷಧಿ ವಾಪಸ್ ಪಡೆಯಲು ಸೂಚನೆ ನೀಡಿದೆ. ಸದ್ಯ ಸರಬರಾಜು ಮಾಡಿರುವ ಔಷಧಿಗಳ ಬದಲಿಗೆ ಹೊಸ ಔಷಧಿ ಸರಬರಾಜು ಮಾಡುವಂತೆ ಸೂಚಿಸಿದೆ. ಉಚಿತವಾಗಿ ಹೊಸ ಔಷಧಿಗಳನ್ನು ನೀಡುವಂತೆ ಹೇಳಿ ಲಕ್ಷಾಂತರ ರೂಪಾಯಿ ಮೌಲ್ಯದ ಹೊಸ ಔಷಧಿ ಸರಬರಾಜು ಮಾಡಲು ಆದೇಶ ಹೊರಡಿಸಿದೆ.
Post a comment
Log in to write reviews