ಬೆಂಗಳೂರು: ರಾಜ್ಯ ರಾಜಧಾನಿಗೆ ಇಂದು ಆಂಧ್ರಪ್ರದೇಶ (Andhra Pradesh) ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ (Pawan Kalyan) ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ (Eshwar Khandre) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಇಂದು ಬೆಳಗ್ಗೆ ಸಿಎಂ ಅಧಿಕೃತ ನಿವಾಸ ಕಾವೇರಿಗೆ ತೆರಳಿ ಸಿದ್ದರಾಮಯ್ಯ ಅವರನ್ನು ಪವನ್ ಕಲ್ಯಾಣ್ ಭೇಟಿಯಾದರು. ಮಧ್ಯಾಹ್ನ ವಿಧಾನಸೌಧಕ್ಕೆ ಆಗಮಿಸಿದ ಪವನ್ ಕಲ್ಯಾಣ್ ಅವರನ್ನು ನೋಡಲು ವಿಧಾನಸೌಧದ ಸಿಬ್ಬಂದಿ ಹಾಗೂ ಸಾರ್ವಜನಿಕರು ಮುಗಿಬಿದ್ದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಪವನ್ ಕಲ್ಯಾಣ್ ಮೀಟಿಂಗ್ ನಡೆಸಿದರು. ಈ ವೇಳೆ ಪವನ್ ಕಲ್ಯಾಣ್ ಅವರನ್ನು ಈಶ್ವರ್ ಖಂಡ್ರೆ ಶಾಲು ಹೊದಿಸಿ, ಗಣಪತಿ ಮೂರ್ತಿ ನೀಡಿ ಗೌರವಿಸಿದರು. ಈಶ್ವರ್ ಖಂಡ್ರೆಗೆ ಪವನ ಕಲ್ಯಾಣ್ ಶಾಲು ಹಾಕಿ ತಿರುಪತಿ ಮೂರ್ತಿ ನೀಡಿ ಗೌರವಿಸಿದರು. ಕರ್ನಾಟಕ ಹಾಗೂ ಆಂದ್ರ ಪ್ರದೇಶದ ಸಮಾನ ಆಸಕ್ತಿಯ ಹಲವು ವಿಚಾರಗಳ ಬಗ್ಗೆ ಉಭಯರು ಚರ್ಚೆ ನಡೆಸಿದ್ದಾರೆ.
ಭದ್ರತಾ ಲೋಪ
ಸಭೆಯಲ್ಲಿ ಪವನ್ ಕಲ್ಯಾಣ್ ಅವರನ್ನು ಗೌರವಿಸುವ ವೇಳೆ ಪ್ರೋಟೋಕಾಲ್ ಉಲ್ಲಂಘನೆ ಹಾಗೂ ಭದ್ರತಾ ಲೋಪ ಕಂಡುಬಂದಿದೆ ಎನ್ನಲಾಗಿದೆ. ವಿಧಾನಸೌಧದ ಸಿಬ್ಬಂದಿಗಳು, ಅಭಿಮಾನಿಗಳು ಪವನ್ ಜೊತೆಗೆ ಫೋಟೋ ವಿಡಿಯೋ ತೆಗೆಸಿಕೊಳ್ಳಲು ನೂಕುನುಗ್ಗಲು ನಡೆಸಿದರು. ಸಭೆ ವೇಳೆಯೂ ನೂಕುನುಗ್ಗಲು ನಡೆಸಿ ಗೊಂದಲ ಸೃಷ್ಟಿಸಿದರು.
Post a comment
Log in to write reviews