ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ ಹಾಗಿದ್ರೆ ಈ ಮನೆಮದ್ದನ್ನ ಬಳಸಿ.
ಕೂದಲು ಉದುರುವಿಕೆ ಸಮಸ್ಯೆಯು ಮಾನಸಿಕವಾಗಿ ತುಂಬಾ ಚಿಂತೆಯನ್ನುಂಟುಮಾಡುವುದು. ಮಾಲಿನ್ಯ, ಒತ್ತಡ ಮತ್ತು ಕೆಟ್ಟ ಗುಣಮಟ್ಟದ ನೀರು ಇದು ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳು. ಜಡ ಜೀವನಶೈಲಿ, ಪೋಷಕಾಂಶಗಳ ಕೊರತೆ, ಅಲರ್ಜಿ, ಹಾರ್ಮೋನ್ ಅಸಮತೋಲನ, ಕೂದಲಿನ ಕೆಟ್ಟ ಆರೈಕೆ ಮತ್ತು ಅನುವಂಶೀಯವಾಗಿಯೂ ಇದು ಬರಬಹುದು. ತಜ್ಞರ ಪ್ರಕಾರ ಕೂದಲು ತೆಳ್ಳಗಾಗುವುದು ಮತ್ತು ಕೂದಲು ಉದುರುವಿಕೆ ಸಮಸ್ಯೆಯು ಇಂದಿನ ದಿನಗಳಲ್ಲಿ ಅತಿಯಾಗಿದೆ. ಈ ಸಮಸ್ಯೆಯನ್ನು ತಡೆಗಟ್ಟಲು ಈ ಮನೆ ಮದ್ದನ್ನು ಬಳಸಿ ನೋಡಿ.
ಮೊದಲಿಗೆ ಒಂದು ಬಟ್ಟಲು ಮೆಂತೆ ಕಾಳನ್ನು ತೆಗೆದುಕೊಂಡು ಇಡೀ ರಾತ್ರಿ ನೀರಿನಲ್ಲಿ ಹಾಕಿ ನೆನೆಸಿ ನಂತರ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ ಈ ಮಿಶ್ರಣಕ್ಕೆ ಅರ್ಧ ಬಟ್ಟಲು ಮೊಸರು, ಎರಡು ಚಮಚ ನಿಂಬೆರಸ ಸೇರಿಸಿ ಮಿಶ್ರಣ ಮಾಡಿ ಇದನ್ನು ನಿಮ್ಮ ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ತಲೆ ಸ್ನಾನ ಮಾಡಿ ವಾರಕ್ಕೆ ಒಂದು ಬಾರಿಯಂತೆ ಮೂರು ತಿಂಗಳು ಮಾಡಿದರೆ ನಿಮ್ಮ ಕೂದಲು ಕುದುರುವಿಕೆಯ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳುತ್ತೀರಿ.
Post a comment
Log in to write reviews