ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ಸರ್ಕಾರ ಶಾಕ್ ನೀಡಿದೆ. ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪೆಟ್ರೋಲ್ 3 ರೂಪಾಯಿ ಹಾಗೂ ಡೀಸೆಲ್ 3.50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ರೀಟೇಲ್ ಸೇಲ್ಸ್ ತೆರಿಗೆಯನ್ನು ಹೆಚ್ಚಿಸಿರುವ ಸರ್ಕಾರ ಜನರಿಗೆ ಶಾಕ್ ಮೇಲೆ ಶಾಕ್ ನೀಡಿದೆ.
ಪರಿಷ್ಕೃತ ದರದ ಪ್ರಕಾರ ಪೆಟ್ರೋಲ್ ಬೆಲೆ 103 ರೂಪಾಯಿಯಾಗಲಿದೆ. ಡೀಸೆಲ್ ದರ 89 ರೂಪಾಯಿ 20 ಪೈಸೆಯಾಗಿದೆ. ಈ ಹಿಂದೆ ಪೆಟ್ರೋಲ್ ಬೆಲೆ 99 ರೂಪಾಯಿ 84 ಪೈಸೆಯಾಗಿತ್ತು. ಡೀಸೆಲ್ 85 ರೂಪಾಯಿ 93 ಪೈಸೆಯಾಗಿತ್ತು. ಈ ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ ಎಂದು ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
Post a comment
Log in to write reviews