ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಕರ್ನಾಟಕ ಕಾಂಗ್ರೆಸ್ ವೇಷದಲ್ಲಿರುವ ಉಗ್ರಗಾಮಿ ಸಂಘಟನೆ ಪಿಎಫ್ಐ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಯಲಹಂಕದ ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಎನ್‌ಎಸ್‌ಯುಐ ಕಾರ್ಯಕರ್ತರು ಮಸಿ ಬಳಿದಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಭಾರತಾಂಬೆಯ ಹೆಮ್ಮೆಯ ಪುತ್ರ ವೀರ ಸಾರ್ವಕರರಿಗೆ ಅಪಮಾನ ಮಾಡಿದರೆ ಖಂಡಿತ ಸಹಿಸುವುದಿಲ್ಲ.
ಅಪ್ರತಿಮ ಸ್ವತಂತ್ರ ಹೋರಾಟಗಾರರಾದ ವೀರ ಸಾವರ್ಕರ್ ಪಾಠಗಳನ್ನು ಪಠ್ಯಪುಸ್ತಕಗಳಿಂದ ಕೈಬಿಡಬೇಕು ಎಂಬುದು ಎಸ್.ಡಿ.ಪಿ.ಐ ಅಂಗಸಂಸ್ಥೆ ಕ್ಯಾಂಪಸ್ ಫ್ರಂಟ್‌ನ ಇರಾದೆಯಾಗಿತ್ತು. ಅದನ್ನು ಈಡೇರಿಸಿ ಪಿಎಫ್ಐ ಗೆ ಮಂಡಿಯೂರಿದ ಕಾಂಗ್ರೆಸ್ ಸರ್ಕಾರ ಈ ಹೇಯ ಕೃತ್ಯ ಮಾಡಿಸಿ ಮತ್ತೊಮ್ಮೆ ಮುಸ್ಲಿಂ ಮೂಲಭೂತವಾದಿಗಳ ತುಷ್ಟೀಕರಣ ಮಾಡುತ್ತಿದೆ.
ಇಂದು ಸಾವರ್ಕರ್‌ರನ್ನು ವಿರೋಧಿಸಬಹುದು. ಆದರೆ, ಸಾವರ್ಕರ್‌ರನ್ನು ಅಪಾರವಾಗಿ ಪ್ರೀತಿಸುವವರು, ಗೌರವಿಸುವ ಅಸಂಖ್ಯಾತ ಭಾರತೀಯರ ಸಾಲಲ್ಲಿ ಗಾಂಧೀಜಿ ಅವರೂ ನಿಲ್ಲುತ್ತಾರೆ. ಗಾಂಧೀಜಿ ಪತ್ರಗಳಲ್ಲಿ ಸಾವರ್ಕರ್‌ರನ್ನು ಪ್ರೀತಿಯಿಂದ ʼಭಾಯ್ʼ ಎಂದು ಸಂಬೋಧಿಸುತ್ತಿದ್ದರು. ಕಾಂಗ್ರೆಸ್ ಗಾಂಧೀಜಿಯನ್ನೂ ವಿರೋಧಿಸುವುದೇ?
ಸಾವರ್ಕರ್ ಅಸ್ಪೃಶ್ಯತಾ ನಿವಾರಣೋಪಾಯಗಳು ಅಂಬೇಡ್ಕರ್ ಅವರಿಗೆ ಪ್ರೇರಣೆಯಾಗಿತ್ತು, ಆದರೆ ಕಾಂಗ್ರೆಸ್ಸಿಗರಿಗೆ ಆಗಲೇ ಇಲ್ಲ. ಅಸ್ಪೃಶ್ಯತೆ ನಿವಾರಿಸಲು ನನ್ನ ಆಶಯಕ್ಕನುಗುಣವಾಗಿ ಸಮಾಜದೊಳಗಿದ್ದು ಶ್ರಮಿಸುತ್ತಿರುವ ಕೆಲವೇ ಕೆಲವು ಮಂದಿಯಲ್ಲಿ ಸಾವರ್ಕರ್ ಕೂಡಾ ಒಬ್ಬರು ಎಂದು ಅಂಬೇಡ್ಕರ್ ಕೊಂಡಾಡಿದ್ದರು. ಆದರೆ ಇಂದು ಅದೇ ಕಾಂಗ್ರೆಸ್ ಪಕ್ಷ ಸಾರ್ವಕರ್ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತೆ ಅಂದರೆ ಇದೇನಾ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಗೆ ನೀಡುವ ಗೌರವ? ಸಾವರ್ಕರ್ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಖುದ್ದು ಸಾವರ್ಕರ್ ಹೋರಾಟವನ್ನು ಕೊಂಡಾಡಿ ಅವರೊಬ್ಬ ಅದ್ಭುತ ಸ್ವಾತಂತ್ರ್ಯ ಹೋರಾಟಗಾರ ಎಂದು ಶ್ಲಾಘಿಸಿ ಪತ್ರ ಬರೆದಿದ್ದರು. ಇದರ ಜೊತೆಗೆ ವೀರ್ ಸಾರ್ವಕರ್ ಸ್ಮಾರಕ ನಿಧಿಗೆ ವೈಯುಕ್ತಿಕವಾಗಿ 11,000 ರೂಪಾಯಿ ದೇಣಿಗೆ ಕೂಡಾ ನೀಡಿದ್ದರು. ಕಾಂಗ್ರೆಸ್ ಪಕ್ಷ ಇಂದಿರಾ ಗಾಂಧಿ ಅವರನ್ನೂ ನಂಬುವುದಿಲ್ಲವೇ?
ಅಂಡಮಾನಿನ ಕತ್ತಲ ಕೋಣೆಯಲ್ಲಿ ವೀರ ಸಾವರ್ಕರ್ ಕಾಲ ಕಳೆಯದಿರುತ್ತಿದ್ದರೆ, ಅವರ ಚಿಂತನೆಗಳು ರಾಷ್ಟ್ರದಲ್ಲಿ ಹರಿಯದಿರುತ್ತಿದ್ದರೆ ಭಾರತ 1947 ರಲ್ಲಿ ಸ್ವತಂತ್ರವಾಗುತ್ತಲೂ ಇರಲಿಲ್ಲ, ನೆಹರೂ ಪರಿವಾರ 60 ವರ್ಷ ಅಧಿಕಾರ ಅನುಭವಿಸಲೂ ಆಗುತ್ತಿರಲಿಲ್ಲ, ಈಗ ಸಿಎಂ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ ಎಂದು ಆರ್ ಅಶೋಕ್ ತಮ್ಮ “X” ಖಾತೆಯಲ್ಲಿ ಬರೆದು ಹಾಕಿದ್ದಾರೆ.
Post a comment
Log in to write reviews