ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡದ ಕೋಚ್ ಹುದ್ದೆಗೆ ಗೂಗಲ್ ಫಾರ್ಮ್ ನಲ್ಲಿ ಅರ್ಜಿ ಆಹ್ವಾನಿಸಿದೆ. ಇದುವರೆಗೆ ಕೋಚ್ ಹುದ್ದೆಗೆ 3000 ಅರ್ಜಿ ಗಳು ಬಂದಿದ್ದು, ಅದರಲ್ಲಿ ಮೋದಿ, ಅಮಿತ್ ಶಾ, ಸಚಿನ್ ತೆಂಡೂಲ್ಕರ್ ಸೇರಿದಂತೆ ಪ್ರಮುಖರ ಹೆಸರಿನಲ್ಲಿ ನೂರಾರು ನಕಲಿ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು ಈ ಬೆಳವಣಿಗೆ ಆಯ್ಕೆದಾರರಿಗೆ ಪೇಚಿಗೆ ಸಿಲುಕಿಸಿದೆ.
ಈ ರೀತಿಯ ಬೆಳವಣಿಗೆ ಇದೇ ಮೊದಲೇನಲ್ಲ. 2022ರಲ್ಲಿ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ 5 ಸಾವಿರ ಅರ್ಜಿ ಬಂದಿದ್ದವು. ಆಗಲೂ ನಕಲಿ ಹೆಸರಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು ಆಗ ಮೇಲ್ ಮೂಲಕ ಅರ್ಜಿ ಕಳುಹಿಸಬೇಕಾಗಿತ್ತು. ಈ ಬಾರಿ ಗೂಗಲ್ ಫಾರ್ಮ್‌ನಲ್ಲಿ ಅರ್ಜಿಗಳನ್ನು ಸ್ವೀಕರಿ ಸಲಾಗಿದೆ. ಈ ಬಾರಿಯೂ ಅಂಥದ್ದೇ ಸಮಸ್ಯೆ ಬಿಸಿಸಿಐಗೆ ಎದುರಾಗಿದೆ.
ರಾಹುಲ್ ದಾವಿಡ್ ಅವರು ಇದುವರೆಗೆ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಈಗ ಅವರ ಸ್ಥಾನ ತುಂಬಲು ಅರ್ಹರಾಗಲು, ಒಬ್ಬರು ಕನಿಷ್ಠ 30 ಟೆಸ್ಟ್ ಪಂದ್ಯಗಳು ಅಥವಾ 50 ಏಕದಿನ ಪಂದ್ಯಗಳನ್ನು ಆಡಿರ ಬೇಕು ಅಥವಾ ಕನಿಷ್ಠ ಎರಡು ವರ್ಷಗಳ ಕಾಲ ಪೂರ್ಣ ಸದಸ್ಯರ ಟೆಸ್ಟ್ ಆಡುವ ರಾಷ್ಟ್ರಕ್ಕೆ ತರಬೇತುದಾರರಾಗಿರಬೇಕು ಎಂಬ ಷರತ್ತು ಬಿಸಿಸಿಐ ವಿಧಿಸಿದೆ. ಈಗ ಗೂಗಲ್ ಫಾರ್ಮ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂಬ ಬಿಸಿಸಿಐನ ಆಹ್ವಾನಕ್ಕೆ ಟೀಕೆಗಳೂ ವ್ಯಕ್ತವಾಗಿದ್ದವು. ಅಂತ ದೊಡ್ಡ ಹುದ್ದೆಗೆ ಗೂಗಲ್ ಫಾರ್ಮ್ ಮೂಲಕ ಅರ್ಜಿ ಸಲ್ಲಿಸಬೇಕೆ ಎಂಬ ಪ್ರಶ್ನೆಗಳೂ ವ್ಯಕ್ತವಾಗಿದ್ದವು.
ನನಗೂ ಇದೆ ಗಲ್ಲಿ ಕ್ರಿಕೆಟ್ ಅನುಭವ ಎಂದ ವೈದ್ಯ
ಇದರ ನಡುವೆ ವೈದ್ಯರೊಬ್ಬರು ನಾನು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿಕೊಂಡಿರುವುದು ಎಲ್ಲರನ್ನು ನಗೆ ಪಾಟಲಿಗೀಡು ಮಾಡಿದೆ. ಇಲ್ಲಿ ವೈದ್ಯರು ನಾನು ನನ್ನ ಶಾಲಾ ವರ್ಷಗಳಲ್ಲಿ ಗಲ್ಲಿ ಕ್ರಿಕೆಟ್ ಆಡಿದ್ದೇನೆ. ನಾನು ಎಸೆದ ಚೆಂಡುಗಳನ್ನು ಯಾರೂ ಆಡಲು ಸಾಧ್ಯವಿರಲಿಲ್ಲ. ಅಷ್ಟೇ ಅಲ್ಲ ನಾನು ಎಸೆದ ಚೆಂಡು ಸ್ಟಂಪ್ ಬಳಿಯೂ ಹೋಗುತ್ತಿರಲಿಲ್ಲ. ಜತೆಗೆ ನಾನು ಸ್ಟೈಲೀಶ್ ಬ್ಯಾಟರ್ ಆಗಿದ್ದೆ,ನನ್ನನ್ನೂ ಪರಿಗಣಿಸಬಹುದು ನೋಡಿ ಎಂದು ಅರ್ಜಿ ಸಲ್ಲಿಸಿದ್ದಾರೆ.
Post a comment
Log in to write reviews