Samayanews.

Samayanews.

2024-12-24 12:53:11

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಹುಬ್ಬಳ್ಳಿ: ಬಹು ನಿರೀಕ್ಷಿತ ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು  ಸೋಮವಾರ (ಸೆ.16) ವರ್ಚುವಲ್​​ ಮೂಲಕ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿ-ಪುಣೆ-ಹುಬ್ಬಳ್ಳಿ ಮಧ್ಯೆ ಸಂಚರಿಸುವ ವಂದೇ ಭಾರತ್​ ರೈಲು ಎರಡು ವಾಣಿಜ್ಯ ಮಹಾನಗರಗಳನ್ನು ಸಂಪರ್ಕಿಸುವ ಕೊಂಡಿಯಾಗಿದೆ.

ಇದು ಕರ್ನಾಟಕದ 10ನೇ ವಂದೇ ಭಾರತ್ ರೈಲಾಗಿದೆ. ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲು ಸಮಯ, ಯಾವ್ಯಾವ ದಿನದಂದು ಸಂಚರಿಸಲಿದೆ ಎಂಬ ತಿಳಿದಿದೆ.

ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಕೇವಲ 8.5 ಗಂಟೆಗಳಲ್ಲಿ 557 ಕಿಮೀ ಕ್ರಮಿಸುತ್ತದೆ. ಇತರ ರೈಲುಗಳಿಗೆ ಹೋಲಿಸಿದರೆ ಸುಮಾರು 3 ಗಂಟೆಗಳ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಈ ರೈಲು ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸುತ್ತದೆ.

ಯಾವ್ಯಾವ ದಿನದಂದು ರೈಲು ಸಂಚರಿಸುತ್ತದೆ:

ಹುಬ್ಬಳ್ಳಿಯಿಂದ ಬುಧವಾರ, ಶುಕ್ರವಾರ ಮತ್ತು ಭಾನುವಾರ ಹೊರಟು ಅದೇ ದಿನ ಪುಣೆ ತಲುಪುತ್ತದೆ. ಪುಣೆಯಿಂದ ಗುರುವಾರ, ಶನಿವಾರ ಮತ್ತು ಸೋಮವಾರ ಹೊರಟು ಹುಬ್ಬಳ್ಳಿ ತಲಪುತ್ತದೆ. ಈ ರೈಲು ಒಟ್ಟು 8 ಬೋಗಿಗಳೊಂದಿಗೆ ಸಂಚರಿಸಲಿದ್ದು, 52 ಎಕ್ಸಿಕ್ಯೂಟಿವ್​ ಕ್ಲಾಸ್​ ಸೀಟ್​ಗಳು ಮತ್ತು 478 ಚೇರ್​ ಕಾರ್​​ ಸೀಟುಗಳು ಇರಲಿವೆ. ಒಟ್ಟು 530 ಆಸನಗಳನ್ನು ಹೊಂದಿದೆ.

ರೈಲು ಸಮಯ:

ರೈಲು ಸಂಖ್ಯೆ 20669: ಎಸ್‌ಎಸ್‌ಎಸ್ ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಸೆಪ್ಟೆಂಬರ್​​​ 18 ರಿಂದ ಜಾರಿಗೆ ಬರುವಂತೆ ಪ್ರತಿ (ಬುಧವಾರ, ಶುಕ್ರವಾರ ಮತ್ತು ಭಾನುವಾರ) ಹುಬ್ಬಳ್ಳಿಯಿಂದ 05.00 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 1.30ಕ್ಕೆ ಪುಣೆ ತಲುಪುತ್ತದೆ.

ರೈಲು ಸಂಖ್ಯೆ 20670: ಪುಣೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಂದೇ ಭಾರತ್ ರೈಲು ಸೆಪ್ಟೆಂಬರ್​ 19 ರಿಂದ ಜಾರಿಗೆ ಬರುವಂತೆ ಪ್ರತಿ (ಗುರುವಾರ, ಶನಿವಾರ ಮತ್ತು ಸೋಮವಾರ) ಪುಣೆಯಿಂದ ಮಧ್ಯಾಹ್ನ 2.15ಕ್ಕೆ ಹೊರಟು ಅದೇ ದಿನ ರಾತ್ರಿ 10.45ಕ್ಕೆ ಹುಬ್ಬಳ್ಳಿ ತಲುಪಲಿದೆ.

ಇಂದು (ಸೆ.16) 4.15ಕ್ಕೆ ಪುಣೆಯಿಂದ ಹೊರಟು ರಾತ್ರಿ 11.40ಕ್ಕೆ ಹುಬ್ಬಳ್ಳಿ ತಲುಪುತ್ತದೆ.

ನಿಲುಗಡೆ

ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲು ಧಾರವಾಡ, ಸತಾರಾ, ಸಾಂಗ್ಲಿ, ಮೀರಜ್ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ವಂದೇ ಭಾರತ್ ಸ್ವದೇಶಿ ರೈಲಾಗಿದೆ. “ಮೇಕ್ ಇನ್ ಇಂಡಿಯಾ”ದ ಪ್ರತೀಕವಾಗಿದೆ. ಮೊದಲ ವಂದೇ ಭಾರತ್​ ರೈಲನ್ನು 2019ರ ಫೆಬ್ರವರಿ 15 ರಂದು ಉದ್ಘಾಟಿಸಲಾಗಿತ್ತು.

img
Author

Post a comment

No Reviews