ಪ್ರಜ್ವಲ್ ಪ್ರಕರಣದಿಂದ ಮನ ನೊಂದ ದೇವೇಗೌಡರು ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎನ್ನುವ ಅಂಶವನ್ನು ಹೆಚ್.ಡಿ.ಕುಮಾರಸ್ವಾಮಿ ಅವರು ಇದೇ ವೇಳೆ ಬಹಿರಂಗಪಡಿಸಿದರು. ಅರವತ್ತು ವರ್ಷಗಳ ತಮ್ಮ ನಿಷ್ಕಳಂಕ ರಾಜಕೀಯ ಜೀವನಕ್ಕೆ ಗಾಯ ಮಾಡಿದ ಈ ಘಟನೆಯಿಂದ ಮಾಜಿ ಪ್ರಧಾನಿಗಳು ಬಹಳ ನೊಂದಿದ್ದಾರೆ. ನಾನು ಹೇಗೆ ಹೋಗಿ ರಾಜ್ಯಸಭೆಯಲ್ಲಿ ಕೂರಲಿ ಎಂದು ಕಣ್ಣೀರು ಹಾಕಿದ್ದರು. ಆದರೆ, ನಾನೇ ಅವರ ಮನವೊಲಿಸಿದೆ.
ರಾಜ್ಯದ ಹಿತಕ್ಕಾಗಿ ನೀವು ರಾಜೀನಾಮೆ ಕೊಡಬಾರದು. ನೀರಾವರಿ ಸೇರಿದಂತೆ ಅನೇಕ ವಿಷಯಗಳಲ್ಲಿ ನಿಮ್ಮಿಂದ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ. ಇನ್ನೂ ನೀರಾವರಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ನೀವು ರಾಜೀನಾಮೆ ಕೊಟ್ಟರೆ ರಾಜ್ಯಕ್ಕೆ ನಷ್ಟ ಆಗುತ್ತದೆ. ರಾಜ್ಯದ ನೀರಾವರಿ ಯೋಜನೆಗಳ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತಲು ನೀವು ಬೇಕು. ದಯಮಾಡಿ ನಿಮ್ಮ ನಿರ್ಧಾರ ಬದಲಿಸಿಕೊಳ್ಳಿ ಎಂದು ನಾನು ಮನವಿ ಮಾಡಿಕೊಂಡೆ ಎಂದರು.
Post a comment
Log in to write reviews