ಅತ್ಯಾಚಾರ ಪ್ರಕರಣದಲ್ಲಿ ತಲೆ ಮರೆಸಿಸಿಕೊಂಡು ವಿದೇಶಕ್ಕೆ ತೆರಳಿದ್ದ ಪ್ರಜ್ವಲ್ ರೇವಣರನ್ನು 34 ದಿನಗಳ ನಂತರ ಎಸ್ಐಟಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.
ರಾಜ್ಯದಲ್ಲಿ ಮೊದಲ ಹಂತದ ಚುಣಾವಣೆ ಮುಗಿದ ನಂತರ ಪ್ರಜ್ವಲ್ ರೇವಣ್ಣ ಏಪ್ರಿಲ್ 27ರಂದು ವಿದೇಶಕ್ಕೆ ತೆರಳಿದ್ದರು. ನಂತರ ಅವರ ಮೇಲೆ ಸಂತ್ರಸ್ತೆಯರಿಂದ ಅತ್ಯಾಚಾರ ದೂರುಗಳು ಕೇಳಿ ಬಂದಿತ್ತು. ಇದರಿಂದಾಗಿ ಎಸ್ಐಟಿ ಪ್ರಜ್ವಲ್ ಬಂಧನಕ್ಕೆ ಸಿದ್ಧವಾಗಿತ್ತು. ಆದರೆ ಹೊರ ದೇಶದಲ್ಲಿದ್ದ ಪ್ರಜ್ವಲ್ ಇಂದು ಬರುತ್ತೇನೆ ನಾಳೆ ಬರುತ್ತೇನೆ ಎಂದು ಎಸ್ ಐ ಟಿ ಯೊಂದಿಗೆ ಕಣ್ಣಮುಚ್ಚಾಲೆ ಆಡುತ್ತಿದ್ದರು. ಇದರ ಸಲುವಾಗಿ ಎಸ್ಐಟಿ ಬ್ಲೂ ಕಾರ್ನರ್ ನೋಟಿಸ್ ಹಾಗು ಲುಕ್ ಔಟ್ ನೋಟಿಸ್ ಅನ್ನು ಸಹ ಅವರ ಮೇಲೆ ಹೊರಡಿಸಿತ್ತು. ಹಾಗೇಯೆ ಪ್ರಜ್ವಲ್ ಈ ಎಲ್ಲಾ ಬೆಳವಣಿಗೆಯ ಕುರಿತು ಸ್ಪಷ್ಟೀಕರಣ ನೀಡೋದಕ್ಕೆ 31ಕ್ಕೆ ಬಾರತಕ್ಕೆ ಬರುತ್ತೇನೆ ಎಂದು ಹೇಳಿದ್ದರು. ಇದೆಲ್ಲಾ ಪ್ರಯತ್ನದ ನಂತರ ಪ್ರಜ್ವಲ್ ರೇವಣ್ಣ ಅವರು ಮೇ 30ರಂದು ಸಂಜೆ ಜರ್ಮನಿಯ ಮ್ಯೂನಿಕ್ ನಿಂದ ಹೊರಟು ಮೇ 31ರ ತಡ ರಾತ್ರಿ ಕೆಂಪೇ ಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಬಂದಿಳಿದ ಕೂಡಲೇ ಪ್ರಜ್ವಲ್ ರನ್ನ ಎಸ್ ಐ ಟಿ ಬಂಧಿಸಿದೆ. ಈ ಸಂಭಂದ ವಿಚಾರಣೆಗೆ ಪ್ರಜ್ವಲ್ ಹಾಜರಾಗಲಿದ್ದು, ಅವರ ಮೇಲಿರುವ ಆರೋಪಗಳು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುವುದು ವಿಚಾರಣೆಯ ನಂತರ ತಿಳಿದು ಬರಲಿದೆ.
Post a comment
Log in to write reviews