ಪೆನ್ ಡ್ರೈವ್ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣರ ಪಾಸ್ಪೋರ್ಸ್ ರದ್ದು ಮಾಡುವಂತೆ ಕೋರಿ ಎಸ್ ಐ ಟಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ.
ನಗರದ ಟಿ ಸಿ ಎಂ ಎಂ ಕೋರ್ಟ್ ಇತ್ತೀಚೆಗೆ ಪ್ರಜ್ವಲ್ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿತ್ತು. ಹಾಗೆಯೇ ಪಾಸ್ಪೋರ್ಟ್ ಕ್ಯಾನ್ಸಲ್ ಮಾಡಲು ಅನುಮತಿ ನೀಡಿತ್ತು. ಹೀಗಾಗಿ ಎಸ್ ಐ ಟಿ ಪಾಸ್ಪೋರ್ಟ್ ರದ್ದು ಮಾಡುವಂತೆ ಕುರಿತು ಪತ್ರ ಬರೆದಿದೆ.
ಈ ಪಾಸ್ಪೋರ್ಟ್ ರದ್ದತಿಯ ಪತ್ರದ ಜೊತೆಗೆ ಎಸ್ ಐ ಟಿ ಲುಕ್ ಔಟ್ ನೋಟಿಸ್ ಬ್ಲೂ ಕಾರ್ನರ್ ನೋಟಿಸ್ ಎಲ್ಲವನ್ನೂ ಟ್ಯಾಗ್ ಮಾಡಿದೆ. ಜೊತೆಗೆ ಎಸ್ ಐ ಟಿ ಪ್ರಜ್ವಲ್ ವಿರುದ್ಧದ ಪ್ರಕರಣಗಳ ಬಗ್ಗೆ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿದ್ದು. ಸಂಸದ ಯಾವ ದೇಶದಲ್ಲಿದ್ದಾರೆ ಎಂಬ ಮಾಹಿತಿ ನೀಡುವಂತೆ ಮನವಿ ಮಾಡಿದೆ.
Post a comment
Log in to write reviews