ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಸ್ ನಲ್ಲಿ ಎಸ್.ಐ.ಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ನಿನ್ನೆ ತಡರಾತ್ರಿ ಎಸ್.ಐ.ಟಿ ಅಧಿಕಾರಿಗಳು ಹಾಗೂ ಎಪ್ಎಸ್ಎಲ್ ತಂಡ ಹಾಸನಕ್ಕೆ ಭೇಟಿ ನೀಡಿ ತಪಾಸಣೆ ಕೈಗೊಂಡಿದ್ದಾರೆ. ಹೊಳೆ ನರಸೀಪುರದ ಶಾಸಕ ರೇವಣ್ಣ. ಹಾಗೂ ಸಂಸದ ಪ್ರಜ್ವಲ್ ನಿವಾಸದಲ್ಲಿ ಕೆಲವು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಹಾಸನದ ಜಿಲ್ಲಾ ಪಂಚಾಯತ್ ಸದಸ್ಯ ನೀಡಿದ ದೂರಿಗೆ ಸಂಬಂಧಿಸಿದಂತೆ ಈ ತಪಾಸಣೆ ಮಹತ್ವ ಪಡೆದಿದೆ.
ಪ್ರಜ್ವಲ್ ರೇವಣ್ಣ ಬರೋ ಸೂಚನೆ ಸಿಕ್ಕ ಮೇಲೆ ಶುರು ಈಗ ಅಸಲಿ ವಿಚಾರಣೆ ವೇಗ ಪಡೆದುಕೊಂಡಿದೆ. ಪ್ರಜ್ವಲ್ ನನ್ನು ಬಂದಿಸಲೇಬೇಕು ಎಂದು ಹಠಕ್ಕೆ ಬಿದ್ದ ಅಧಿಕಾರಿಗಳು ಅಕ್ಕ ಪಕ್ಕದ ಜಿಲ್ಲೆಯ ಏರ್ಪೊರ್ಟ್ ಮೇಲೆ ಕಣ್ಣಿಟ್ಟಿದ್ದಾರೆ. ಅಷ್ಟಕ್ಕೂ ಪ್ರಜ್ವಲ್ ಬಂದ್ಮೇಲೆ SIT ತನಿಖಾಧಿಕಾರಿಗಳು ಅವರನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಪಡೆಯುತ್ತಾರೆ. ಮೆಡಿಕಲ್ ಟೆಸ್ಟ್ ಮಾಡಿಸಿ ನಂತರ ವಿಚಾರಣೆ ಪ್ರಕ್ರಿಯೆ ಆರಂಭವಾಗುತ್ತದೆ. ನಂತರ ಮೊದಲು ಸ್ಥಳ ಮಹಜರು, ಆರೋಪಿ ಹೇಳಿಕೆ ದಾಖಲು ಮಾಡಿಕೊಳ್ಳುತ್ತಾರೆ.
ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಉಲ್ಟಾ ಹೊಡೆಯೋ ಸಾಧ್ಯತೆಗಳು ಇರೋದ್ರಿಂದ ಅಥವಾ ಅತ್ಯಾಚಾರ ಮಾಡಿಲ್ಲ ಅಂತಾ ಕೋರ್ಟ್ ಗೆ ಅಫಿಡೆವಿಟ್ ಸಲ್ಲಿಸೋ ಸಾಧ್ಯತೆ ಇರುವ ಕಾರಣ ಪ್ರಜ್ವಲ್ ಮತ್ತು ಸಂತ್ರಸ್ಥೆಯನ್ನ ಎದರುಬದುರು ನಿಲ್ಲಿಸಿ ಪ್ರಜ್ವಲ್ ರೇವಣ್ಣರನ್ನ ತೋರಿಸಿ ಇವ್ರೇ ನಾ ಅಂತಾ ಗುರುತು ದಾಖಲೆ ಇಟ್ಟು ಅದನ್ನು ಅನ್ ಕ್ಯಾಮರಾ ರೆಕಾರ್ಡ್ ಮಾಡುವ ಪ್ರಕ್ರಿಯೆ ನಡೆಯುತ್ತದೆ.
ಈಗಾಗಲೇ ಸ್ಥಳ ಮಹಜರು ಪ್ರಕ್ರಿಯೆ ಎಸ್ಐಟಿ ಶುರು ಮಾಡಿ ಮಹತ್ವದ ವೈಜ್ಞಾನಿಕ ದಾಖಲೆಯನ್ನು ಕಲೆ ಹಾಕಿದೆ. ಸಂತ್ರಸ್ಥೆಯನ್ನ ಕರೆದೊಯ್ದು ಸ್ಥಳ ಮಹಜರು ಕೂಡಾ ಮುಗಿಸಿದೆ. ನಿನ್ಮೆ ತಡ ರಾತ್ರಿ ಹೊಳೆನರಸೀಪುರ ಮನೆಯನ್ನ ಸಂಪೂರ್ಣ ಸ್ಥಳ ಮಹಜರು ಮಾಡಿ ಸಿಕ್ಕ ದಾಖಲೆಗಳನ್ನು, ಅಲ್ಲಿ ಸಿಕ್ಕಿರೋ ಒಂದಷ್ಟು ಎವಿಡೆನ್ಸ್ ಮುಂದಿಟ್ಟು ಪ್ರಶ್ನೆಗಳು ಮಳೆ ಸುರಿಯುತ್ತದೆ.
ಈಗಾಗಲೇ ಪ್ರಜ್ವಲ್ ರೇವಣ್ಣರ ಮೊಬೈಲ್ ನಿಂದಲೇ ವಿಡಿಯೊ ರೆಕಾರ್ಡ್ ಮಾಡಿರೋ ಮಾಹಿತಿ ಇರುವ ಕಾರಣ ಪ್ರಕರಣದಲ್ಲಿ ಮೊಬೈಲ್ ಪ್ರೈಮ್ ಎವಿಡೆನ್ಸ್ ಆಗಿ ಪರಿಗಣನೆ ಸಾಧ್ಯತೆ ಇದೆ ಎಂದು SIT ಮೂಲಗಳು ತಿಳಿಸಿದೆ.
ಒಂದು ವೇಳೆ ಮೊಬೈಲ್ ನ ಫಾರ್ಮೆಟ್ ಮಾಡಿದ್ರೆ ರಿಟ್ರೀವ್ ಗೆ ಕಳಿಸುವ ಪ್ರಯತ್ನ ಪೋಲಿಸರು ನಡೆಸಿದ್ದಾರೆ. ಅಂತು ಇಂತು ಪೆನ್ ಡ್ರೈವ್ ಕೇಸ್ ನಲ್ಲಿ ಅಸಲಿ ಆಟ ಪ್ರಜ್ವಲ್ ಬಂದ ನಂತರ ಶುರುವಾಗುವುದು ಖಚಿತ.
Post a comment
Log in to write reviews