ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ ಐ ಟಿ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ.
ಇದರ ಬಗ್ಗೆ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎನ್‌ಡಿಎಯ ಹಾಸನ ಲೋಕಸಭೆ ಅಭ್ಯರ್ಥಿ ಜರ್ಮನಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಅವರಿಗೆ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ. ಇಂಟರ್‌ಪೋಲ್ ಎಲ್ಲಾ ದೇಶಗಳಿಗೆ ಮಾಹಿತಿ ನೀಡಿ ಅವರನ್ನು ಪತ್ತೆ ಮಾಡುತ್ತದೆ ಎಂದು ತಿಳಿಸಿದರು.
"ಬ್ಲೂ ಕಾರ್ನರ್" ನೋಟಿಸ್ ಎಂದರೇನು..?
ಬ್ಲೂ ಕಾರ್ನರ್ ನೋಟಿಸ್‌ನ ಸೂಚನೆಯು ಇಂಟರ್‌ಪೋಲ್‌ನ ಕೋಡೆಡ್ ನೋಟೀಸ್‌ಗಳ ಒಂದು ಭಾಗವಾಗಿದೆ. ಈ ನೋಟಿಸ್ ಜಾರಿಯಾದರೆ ಜಗತ್ತಿನಾದ್ಯಂತ ಮಾಹಿತಿ, ಎಚ್ಚರಿಕೆಗಳು ಮತ್ತು ಮನವಿಗಳನ್ನು ಬೇರೆ ಬೇರೆ ದೇಶಗಳ ಅಧಿಕಾರಿಗಳಿಗೆ ರವಾನಿಸಿದಂತಾಗುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು, ಹಾಗೆಯೇ ಅಪರಾಧಗಳ ಕುರಿತು ಮಾಹಿತಿ ಹಂಚಿಕೆಗೆ ಈ ನೋಟಿಸ್ ಸಹಕಾರಿಯಾಗಲಿದೆ.
ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಕುರಿತು ಹೆಚ್ಚುವರಿ ಮಾಹಿತಿ ಸಂಗ್ರಹಿಸಲು ಬ್ಲೂ ಕಾರ್ನರ್ ಸಹಾಯ ಮಾಡುತ್ತದೆ.
ಬ್ಲೂ ಕಾರ್ನರ್ ನೋಟಿಸ್ ಗಳಂತೆ ಒಟ್ಟು 07 ಏಳು ವಿಧದ ನೋಟಿಸ್‌ಗಳಿವೆ.
ಸಂದರ್ಭಕ್ಕೆ ತಕ್ಕಂತೆ ತನಿಖಾಧಿಕಾರಿಗಳು, ಇಲ್ಲವೇ ಸಂಬಂಧಿಸಿದ ಸಂಸ್ಥೆ ಜಾರಿಗೊಳಿಸಬಹುದು.
Post a comment
Log in to write reviews