ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ನನ್ನು ರೇವಣ್ಣನನ್ನು 6 ದಿನಗಳ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ.
ನಗರದ 42 ನೇ ಎಸಿಎಂಎಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ವಿಚಾರಣಾ ನ್ಯಾಯಾಲಯ ಮುಂದೆ ಪ್ರಜ್ವಲ್ ನನ್ನು ಎಸ್ಐಟಿ ತಂಡ ಹಾಜರು ಪಡಿಸಿತು.
ಈ ವೇಳೆ ಎಸ್ಐಟಿ ಪರ ಎಸ್ಪಿಪಿ ಕುಮಾರ ನಾಯ್ಕ್ ವಾದ ಮಂಡಿಸಿ, ಪ್ರಜ್ವಲ್ ಓರ್ವ ಇವನು ಒಬ್ಬ ವಿಕೃತ ಕಾಮಿ. ಈತನಿಂದ 100 ಕ್ಕೂ ಹೆಚ್ಚು ಮಹಿಳೆಯರು ಸಂತ್ರಸ್ತರಾಗಿದ್ದಾರೆ. ಈತ ತುಂಬಾ ಡೇಂಜರ್. ಸಂತ್ರಸ್ತ ಮಹಿಳೆಯ ಹೇಳಿಕೆ ಪ್ರಕಾರ ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ, ವಾಟ್ಸ್ಆ್ಯಪ್ ಕಾಲ್ ಮಾಡಿ ಬಟ್ಟೆ ಬಿಚ್ಚಲು ಹೇಳಿದ್ದಾನೆ. ವಿಡಿಯೋ ಮಾಡಿರುವ ಮೊಬೈಲ್ ಪತ್ತೆ ಮಾಡಬೇಕಿದೆ, ಜೊತೆಗೆ ಹಲವು ಸಾಕ್ಷಿಗಳನ್ನು ಪತ್ತೆ ಮಾಡಬೇಕಿದೆ, ಈತ ದೇಶ ಬಿಟ್ಟು ಹೋಗಿದ್ದು ವಾಪಸ್ಸು ಬರುವ ಉದ್ದೇಶ ಈತನಿಗೆ ಇರಲಿಲ್ಲ, ಮಾಧ್ಯಮದಲ್ಲಿ ಸುದ್ದಿ ಆಗಬಾರದೆಂದು ತಡೆಯಾಜ್ಞೆ ತರಲಾಗಿದೆ. ಹೀಗಾಗಿ ಪ್ರಜ್ವಲ್‌ನನ್ನು ತನಿಖೆ ಮಾಡಬೇಕಿದ್ದು ಕಸ್ಟಡಿಗೆ ನೀಡುವಂತೆ ಮನವಿ ವಾದ ಮಂಡನೆ ಮಂಡಿಸಿದರು.
ಇದಲ್ಲದೆ ಆರೋಪಿ ವಿಚಾರಣೆ ತುಂಬಾ ಅಗತ್ಯವಿದೆ. ಸಂತ್ರಸ್ತರಿಗೆ ಹೆದರಿಸಿ ಕಿರುಕುಳ ನೀಡಿದ್ದಾನೆ. ಇದು ದೊಡ್ಡ ಪ್ರಕರಣವಾಗಿದೆ. ಈ ಸಂಬಂಧ ಗುರುವಾರ ಹಾಸನದಲ್ಲಿ ಪ್ರತಿಭಟನೆ ಆಗಿದೆ. ವಿದೇಶಕ್ಕೆ ಯಾಕಾಗಿ ಹೋಗಿದ್ದೆ ಎಂದು ಇಲ್ಲಿಯವರೆಗೆ ಪ್ರಜ್ವಲ್ ಹೇಳಿಲ್ಲ. ಪ್ರಜ್ವಲ್‌ನ ಹೆಚ್ಚಿನ ವಿಚಾರಣೆ ಅಗತ್ಯವಿದೆ. ಅಲ್ಲದೆ ಆರೋಪಿ ಬಗ್ಗೆ ಸಾಕಷ್ಟು ಸಾಕ್ಷಿಗಳಿದ್ದು, ಆರೋಪಿ ಕೃತ್ಯದಿಂದ ತುಂಬಾ ಮನೆಗಳಲ್ಲಿ ಒಡಕು ಮೂಡಿದೆ. ಅಲ್ಲದೆ ಮನೆಗಳಲ್ಲಿ ಸಂತ್ರಸ್ತೆಯರ ಗಂಡಂದಿರು ಅನುಮಾನ ಪಡುತ್ತಿದ್ದಾರೆ. ಹೀಗಾಗಿ 14 ದಿನ ಕಸ್ಟಡಿಗೆ ನೀಡಿ ಅಂತ ಎಸ್ಐಟಿ ಪರ ವಕೀಲರು ವಾದ ಮಂಡಿಸಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ಪ್ರಜ್ವಲ್ ಪರ ವಕೀಲರಾದ ಅರುಣ್, ಆರೋಪಿ ಕಿರಿಕಿರಿ ಮಾಡಿದ ಬಗ್ಗೆ ಸಾಕ್ಷಿ ಇಲ್ಲ. ಅಲ್ಲದೆ ವಿಡಿಯೋ ಮಾಡಿದ್ದಾರೆ ಎನ್ನಲಾದ ಡಿವೈಸ್ ಇಲ್ಲ. ಆರೋಪಿ ಎಸ್ಐಟಿ ಮುಂದೆ ಶರಣಾಗಿದ್ದಾನೆ. 14 ದಿನ ಕಸ್ಟಡಿಗೆ ಕೇಳುವುದು ನ್ಯಾಯ ಬದ್ಧವಲ್ಲ. ಕಸ್ಟಡಿಗೆ ಕೊಡಿ ಬೇಡ ಅನ್ನಲ್ಲ. ಕೊಟ್ಟರೆ ಒಂದು ದಿನ ಮಾತ್ರ ಕೊಡಿ ಅಂತ ವಾದ ಮಂಡಿಸಿದರು. ಬಂಧಿಸಲಾದ ಕೊಠಡಿಯಲ್ಲಿ ಶೌಚಾಲಯ ಸರಿಯಿಲ್ಲ. ವಾಸನೆ ಬರುತ್ತಿದೆ ಎಂದು ಮನವಿ ಮಾಡಿರುವ ಪ್ರಜ್ವಲ್ ತನಗೆ ಮನೆಯ ಊಟ ನೀಡುವಂತೆ ವಕೀಲರ ಮೂಲಕ ಕೋರಿದ್ದಾರೆ, ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಆದೇಶವನ್ನು ಮುಂದೂಡಿತ್ತು.
Post a comment
Log in to write reviews