ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಕಾಂಬಿನೇಷನ್ ಹೊಸ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್!
ಬೆಂಗಳೂರು: ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ಮತ್ತು ಜ್ಯೂ.ಎನ್‌ಟಿಆರ್ (Jr.Ntr) ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾದ ಮುಹೂರ್ತ (ಆ.9) ಹೈದರಾಬಾದ್‌ನಲ್ಲಿ ಸರಳವಾಗಿ ಜರುಗಿದೆ. ಬಹು ನಿರೀಕ್ಷಿತ ಚಿತ್ರವನ್ನು ತಾತ್ಕಾಲಿಕವಾಗಿ “NTR31” ಎಂದು ಹೆಸರಿಡಲಾಗಿದೆ. 2026 ರಜನವರಿ 9ರಂದು ಸಿನಿಮಾ ಥಿಯೇಟರ್‌ಗೆ ಎಂಟ್ರಿ ಕೊಡಲಿದೆ.
ಮೈತ್ರಿ ಮೂವಿ ಮೇಕರ್ಸ್ ಅಧಿಕೃತ X ಹ್ಯಾಂಡಲ್ (ಚಿತ್ರದ ನಿರ್ಮಾಣ ಸಂಸ್ಥೆ), ಹೊಸ ಪೋಸ್ಟರ್ ಜೊತೆಗೆ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ. “ಈ ಬಾರಿ, ಅವರ ಆಳ್ವಿಕೆಯಲ್ಲಿ ಭೂಮಿ ಕಂಪಿಸುತ್ತದೆ! MAN OF MASSES ʼʼಎಂದು ಬರೆದುಕೊಂಡಿದೆ. ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ಜ್ಯೂ.ಎನ್‌ಟಿಆರ್ ನಟನೆಯ 31ನೇ ಸಿನಿಮಾದ ಮುಹೂರ್ತ ಕಾರ್ಯಕ್ರಮ ಸಂಭ್ರಮದಿಂದ ಜರುಗಿದೆ. ಈ ವೇಳೆ, ಚಿತ್ರತಂಡದ ಜೊತೆ ತಾರಕ್ ಸಹೋದರ ಕಲ್ಯಾಣ್ ರಾಮ್ ಕುಟುಂಬ, ಪ್ರಶಾಂತ್ ನೀಲ್ ಕುಟುಂಬಸ್ಥರಷ್ಟೇ ಭಾಗಿಯಾಗಿದ್ದರು.
ಕೆಲವು ವರ್ಷಗಳ ಹಿಂದೆ ಈ ಚಿತ್ರ ಘೋಷಿಸಲ್ಪಟ್ಟಿದ್ದರೂ, ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಅವರ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಸಿನಿಮಾ ವಿಳಂಬವಾಯಿತು. ಚಿತ್ರೀಕರಣವು ಸೆಪ್ಟೆಂಬರ್ 2024 ರಲ್ಲಿ ಪ್ರಾರಂಭವಾಗಲಿದೆ ಎಂಬ ಸುದ್ದಿಯಿದೆ.
ಇದೇ ಚಿತ್ರಕ್ಕೆ ʻಡ್ರ್ಯಾಗನ್ʼ ಎಂದೂ ಹೆಸರಿಡಬಹುದು ಎಂಬ ಊಹಾಪೋಹವಿದೆ. ಹಲವಾರು ತಿಂಗಳುಗಳಿಂದ ಪ್ರೀ-ಪ್ರೊಡಕ್ಷನ್ ನಡೆಯುತ್ತಿದೆ. ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡೋದಾಗಿ ಘೋಷಣೆ ಮಾಡಿದ್ರೂ ಕೂಡ ಇತ್ತೀಚೆಗೆ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಈಗ ಇದ್ದಕ್ಕಿದ್ದಂತೆ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿ ಮುಹೂರ್ತ ಕಾರ್ಯಕ್ರಮ ಮಾಡಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.
ಜ್ಯೂನಿಯರ್ ಎನ್‌ಟಿಆರ್ ಅವರ ಜನ್ಮದಿನವಾದ ಜನವರಿ 8 ರಂದು, ‘ದೇವರ’ ನಿರ್ಮಾಪಕರು ಫಸ್ಟ್ ಲುಕ್‌ವನ್ನು ಹಂಚಿಕೊಂಡಿದ್ದರು, ಅಲ್ಲಿಂದ ಸಿನಿಮಾ ಬಗ್ಗೆ ಸಿನಿರಸಿಕರಿಗೆ ನಿರೀಕ್ಷೆ ಹೆಚ್ಚಾಗಿತ್ತು. ಸೈಫ್ ಅಲಿಖಾನ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾರಣಗಳಿಂದಾಗಿ ದೇವರ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.
ಜ್ಯೂನಿಯರ್ ಎನ್‌ಟಿಆರ್, ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ದೇವರ’ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್‌ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ.ಎನ್‌ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ.
ದೇವರ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಯೂ ಇದೆ. ಅಪ್ಪ-ಮಗ ಎರಡೂ ಪಾತ್ರದಲ್ಲಿ ಇವರೇ ಅಭಿನಯ ಮಾಡಲಿದ್ದಾರಂತೆ. ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರದಂತೆ ಕಾಣಿಸುತ್ತಿದೆ. ಯುವಸುಧಾ ಆರ್ಟ್ಸ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಆರ್ಟ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ನಂದಮೂರಿ ಕಲ್ಯಾಣ್ ರಾಮ್ ಅವರು ಪ್ರಸ್ತುತಪಡಿಸಿದ್ದಾರೆ.
ಈ ಚಿತ್ರದ OTT ಹಕ್ಕುಗಳನ್ನು ಸ್ಟ್ರೀಮಿಂಗ್ ಕಂಪನಿ ನೆಟ್ಫ್ಲಿಕ್ಸ್ ಭಾರಿ ಬೆಲೆಗೆ ಪಡೆದುಕೊಂಡಿದೆ. ಮಾಹಿತಿಯ ಪ್ರಕಾರ, ನೆಟ್ಫ್ಲಿಕ್ಸ್ 155 ಕೋಟಿ ರೂಪಾಯಿ ನೀಡಿ ಈ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Post a comment
Log in to write reviews