ಚಿಕ್ಕೋಡಿ: ಅರ್ಧಕ್ಕೆ ನಿಂತ ಕಾಮಗಾರಿ ಹಾಗೂ ಮಳೆಗೆ ಕಿತ್ತು ಹೋಗಿರುವ ರಸ್ತೆಯಿಂದಾಗಿ ಸಾರ್ವಜನಿಕರು ಪರದಾಡುವಂತ ಪರಿಸ್ಥಿತಿ ಮೂಡಲಗಿ ಪಟ್ಟಣದಲ್ಲಿ ಎದುರಾಗಿದೆ.
ಮುಸಗುಪ್ಪಿ - ಮೂಡಲಗಿಯ ರಸ್ತೆಯ ಕಾಮಗಾರಿ ಸುಮಾರು 5 ವರ್ಷದಿಂದ ಅರ್ಧಕ್ಕೆ ನಿಂತಿದೆ. ಮಳೆಯಿಂದಾಗಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿದೆ. ಪುರಸಭೆಯ ಅಧಿಕಾರಿಗಳು ಅವ್ಯವಸ್ಥೆಯನ್ನು ಕಂಡರೂ ಕಾಣದಂತಿದ್ದಾರೆ. ಹೀಗಾಗಿ ಮಳೆ ನಿಂತು ಒಂದು ತಿಂಗಳ ಕಳೆದರೂ ಪರಿಸ್ಥಿತಿ ಇದೇ ರೀತಿ ಇರುತ್ತದೆ. ವಾಹನ ಸವಾರರು ಮತ್ತು ಜನಸಾಮಾನ್ಯರು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಇಲ್ಲಿ ನೋಡಬಹುದು. ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಈ ಸಮಸ್ಯೆಗೆ ಇಲ್ಲಿಯವರೆಗೆ ಪರಿಹಾರ ಸಾಧ್ಯವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
Post a comment
Log in to write reviews