ಕಳೆದ ಎರಡು ದಿನದಿಂದ ಬೆಂಗಳೂರಿನಲ್ಲಿ ಗುಡುಗು ಸಹಿತ ಗಾಳಿಮಳೆ ಉಂಟಾಗಿದೆ. ಇದರಿಂದ ನಿನ್ನೆ ಮಧ್ಯಾನ್ನ ಆರ್ ಟಿ ನಗರದ ರವೀಂದ್ರನಾಥ ಟ್ಯಾಗೋರ್ ವೃತ್ತದ ಬಳಿ ಬೃಹತ್ ಮರವೊಂದು ನೆಲಕ್ಕುರುಳಿತ್ತು. ಇದರಿಂದಾಗಿ ಕೆಲವು ಸಮಯ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಈ ಕುರಿತು ಬಿ ಬಿ ಎಮ್ ಪಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮೊದಲು ಬೆಂಗಳೂರಿನ ರಸ್ತೆ ಪಕ್ಕದಲ್ಲಿರುವ ಮರಗಳ ಆಯಸ್ಸನ್ನು ಸರ್ವೆಮಾಡಬೇಕು. ಪ್ರಬಲವಾಗಿರದ ಮರಗಳನ್ನು ಮೊದಲೇ ತೆರವುಗೊಳಿಸಬೇಕು. ಆರೋಗ್ಯವಾಗಿರುವ ಮರಗಳಿಗೆ ಕಟ್ಟೆ ಕಟ್ಟಿ ನೀರಿನ ವ್ಯವಸ್ಥೆ ಮಾಡಬೇಕು ಎಂದು ಯಶೋಧಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ವಾಣಿ ಶೆಟ್ಟಿ ಎಚ್ಚರಿಸಿದರು.
Post a comment
Log in to write reviews