ಉತ್ತರ ಪ್ರದೇಶ: ಹತ್ರಾಸ್ ನಲ್ಲಿ ಸತ್ಸಂಗವೊಂದರ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಯಾದರು.
ಮೊದಲಿಗೆ ಅಲಿಗಢದ ಪಿಲಖಾನ ಹಳ್ಳಿಗೆ ತೆರಳಿದ ಅವರು, ಸಂತ್ರಸ್ತರ ಕುಟುಂಬ ವರ್ಗದವರ ಜೊತೆ ಮಾತುಕತೆ ನಡೆಸಿದರು. ಬಳಿಕ ಹತ್ರಾಸ್ಗೆ ತೆರಳಿ ಅಲ್ಲಿಯೂ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಬಂಧಿಕರ ನೋವು ಆಲಿಸಿದರು. ಬಳಿಕ ರಾಹುಲ್ ಗಾಂಧಿ, ಇದೊಂದು ದುಃಖಕರ ಘಟನೆ. ಹಲವು ಮಂದಿ ಸಾವಿಗೀಡಾಗಿದ್ದಾರೆ. ಈ ಬಗ್ಗೆ ನಾನು ರಾಜಕೀಯ ಹೇಳಿಕೆ ನೀಡಲು ಹೋಗುವುದಿಲ್ಲ. ಆದರೆ ಇಲ್ಲಿನ ಆಡಳಿತ ವರ್ಗದಿಂದ ಲೋಪವಾಗಿದೆ. ಮೃತ ಕುಟುಂಬ ವರ್ಗದವರು ಕಡುಬಡವರಾಗಿರುವುದರಿಂದ ಗರಿಷ್ಠ ಪರಿಹಾರ ನೀಡುವುದು ಮುಖ್ಯ. ಹೃದಯ ತೆರೆದು ಈ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡುತ್ತೇನೆ. ಪರಿಹಾರ ನೀಡುವುದರಲ್ಲಿ ವಿಳಂಬವಾದರೆ ಅದು ಯಾರಿಗೂ ಅನುಕೂಲವಾಗುವುದಿಲ್ಲ. ಮೃತರ ಕುಟುಂಬ ವರ್ಗದವರ ಜೊತೆ ನಾನು ಮಾತನಾಡಿದೆ. ಸತ್ಸಂಗದ ವೇಳೆ ಪೊಲೀಸ್ ವ್ಯವಸ್ಥೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಅವರು ಆಘಾತದಲ್ಲಿದ್ದಾರೆ. ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಬಯಸಿದ್ದೇನೆ ಎಂದು ಹೇಳಿದ್ದಾರೆ.
Post a comment
Log in to write reviews