ಇಸ್ಲಾಮಾಬಾದ್: ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜಿವಾಲ್‌ಗೆ ಈಗಾಗಲೇ ಹಲವು ಬಾರಿ ತಮ್ಮ ಬೆಂಬಲ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ಸಚಿವ ಫಹಾದ್ ಚೌಧರಿ, ಈಗ ಮತ್ತೆ ಭಾರತದ ಲೋಕಸಭಾ ಚುನಾವಣೆಯ ವಿಷಯದಲ್ಲಿ ಮೂಗು ತುರಿಸಿದ್ದಾರೆ.
ಭಾರತ ಪ್ರಗತಿಪರ ರಾಷ್ಟ್ರವಾಗಿ ಮುನ್ನಡೆಯಬೇಕೆಂದರೆ 'ತೀವ್ರಗಾಮಿ ಸಿದ್ಧಾಂತ' ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ಬಾರಿ ಸೋಲಿಸಬೇಕು ಎಂದು ಐಎಎನ್‌ಎಸ್‌ಗೆ ನೀಡಿರುವ ಸಂದರ್ಶನದಲ್ಲಿ ಕರೆ ನೀಡಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಸಿಎಂ ಕೇಜಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ 'ಚುನಾವಣೆಯಲ್ಲಿ ವಿಜಯಿಯಾಗಿ' ಎಂದು ಶುಭ ಹಾರೈಸಿದ್ದಾರೆ.
ಪಾಕಿಸ್ತಾನದ ಜನರೆಲ್ಲರಿಗೂ ಮೋದಿ ಸೋಲಬೇಕೆಂಬ ಆಸೆಯಿದೆ. ನೆರೆರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದರಲ್ಲೇ ಭಾರತದ ಒಳಿತು ಅಡಗಿದೆ ಎಂದಿದ್ದಾರೆ.
ಇಮ್ರಾನ್‌ಖಾನ್ ಸಂಪುಟದಲ್ಲಿ ಫಹಾದ್ ಸಚಿವರಾಗಿದ್ದರು. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ತಮ್ಮ ರ್ಯಾಲಿಯೊಂದರಲ್ಲಿ, 'ಭಾರತದ ಕೆಲವು ರಾಜಕಾರಣಿಗಳಿಗೆ ಪಾಕಿಸ್ತಾನದ ಬೆಂಬಲ ಇದ್ದು, ಇದರ ಬಗ್ಗೆ ತೀವ್ರ ತನಿಖೆ ನಡೆಸುವ ಅವಶ್ಯಕತೆ ಇದೆ' ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
Post a comment
Log in to write reviews