ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ರೈತರು ಬೆಳೆದ ಶುಂಠಿ ಬೆಳೆ ನೀರುಪಾಲಾಗಿದೆ. ಇಂದು ಬೆಳಿಗ್ಗೆ ಮೈಸೂರು ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಸುರಿದಿದೆ. ಹಾಗೆಯೇ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನಲ್ಲಿ ದಾರಾಕಾರ ಮಳೆ ಸುರಿದಿದ್ದು, ರಸ್ತೆಯ ತುಂಬೆಲ್ಲಾ ನೀರು ತುಂಬಿಕೊಂಡು ಜನರು ಒಡಾಡಲೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ರೈತರು ಬೆಳೆದ ನೂರಾರು ಎಕರೆಯೆ ಶುಂಠಿ ನೀರು ಪಾಲಾಗಿದ್ದು ಜನಜೀವನ ಅಸ್ಥವ್ಯಸ್ಥವಾಗಿದೆ.
ಇನ್ನು ಪಿರಿಯಾಪಟ್ಟಣ ತಾಲೂಕುನ ತರಿಕಲ್ ಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಾಲಗೆರೆಯ ಕೋಡಿ ತುಂಬಿ ಒಡೆದು ಜನಜೀವನ ಅಸ್ಥವ್ಯಸ್ಥವಾಗಿದೆ. ಕೆರೆ ಒಡೆದ ಪರಿಣಾಮ ಕೆಲ ಜಾನುವಾರುಗಳು ನೀರಿನಲ್ಲಿ ತೇಲಿ ಹೋಗುತ್ತಿದ್ದು, ಕೆರೆ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಕರುವನ್ನು ಯುವಕರು ರಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ರೈತರು ಬೆಳೆದಿದ್ದ ಅಪಾರ ಪ್ರಮಾಣದ ಶುಂಠಿ ಬೆಳೆಗಳು ಹಾಗೂ ತಂಬಾಕು ಸಸಿಗಳು ಜಲಾವೃತವಾಗಿದೆ. ಈ ಮಳೆಯಿಂದಾಗಿ ಬೆಟ್ಟದಪುರ- ಕುಶಾಲನಗರ ರಸ್ತೆ ಮೇಲೆ ಮಂಡಿಯುದ್ದ ನೀರು ನಿಂತಿದ್ದು ಜನರು ಒಡಾಡಲೂ ಪರದಾಡುವ ಪರಿಸ್ಥಿತಿ ನಿಮಾ೯ಣವಾಗಿದೆ.
Post a comment
Log in to write reviews