ಬೆಂಗಳೂರು : ಜಿಪ್ಲೈನ್ ಆಡಲು ಹೋಗಿ ಮಹಿಳೆ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಬೆಟ್ಟಹಳ್ಳಿ ಬಳಿಯ ಜಂಗಲ್ ಟ್ರೈಯಲ್ಸ್ ರೆಸಾರ್ಟ್‌ನಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ ನಿವಾಸಿ ರಂಜಿನಿ 35 ವರ್ಷದ ಯುವತಿ. ರಜಾ ದಿನ ಕಳೆಯಲು ರಂಜಿನಿ 18 ಮಂದಿಯೊಂದಿಗೆ ಜಂಗಲ್ ಟ್ರೈಯಲ್ಸ್ ರೆಸಾರ್ಟ್‌ಗೆ ಆಗಮಿಸಿದ್ದರು. ಜಿಪ್ ಲೈನ್ ಆಡುವಾಗ ಕೇಬಲ್ ತುಂಡಾಗಿದ್ದರಿಂದ ಮಹಿಳೆ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಮೃತ ರಂಜಿನಿ ಜೆಪಿ ನಗರದ ಮಿಲನ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದರು.
ರೆಸಾರ್ಟ್ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ ಎಂದು ರಂಜಿನಿ ಸಂಬಂಧಿಕರು ಆರೋಪಿಸಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೋಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೆಸಾರ್ಟ್ ಮ್ಯಾನೇಜರ್ ಪುಟ್ಟಮಾದು ಎನ್ನುವವರನ್ನು ಅರೆಸ್ಟ್ ಮಾಡಿದ್ದಾರೆ.
Post a comment
Log in to write reviews