ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದ ರಾಮೇಶ್ವರಂ ಕೇಫೆ ಪ್ರಕರಣದಲ್ಲಿ ಹುಬ್ಬಳ್ಳಿ ಹೆಸರು ಕೇಳಿ ಬರ್ತಾ ಇದೆ. ರಾಮೇಶ್ವರಂ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳು ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟಿದ್ದಾರೆ ಎನ್ನುವಂತ ಮಾಹಿತಿ ಆಧಾರವಾಗಿ NIA ಹುಬ್ಬಳ್ಳಿಯಲ್ಲಿ ತನಿಖೆ ಕಾರ್ಯ ಆರಂಭಿಸಿತ್ತು.
ಖಚಿತ ಮಾಹಿತಿ ಆಧರಿಸಿ ಹೊರಟ NIA ತಂಡ 11 ಪ್ರದೇಶಗಳ ಮೇಲೆ ದಾಳಿ ನೆಡಿಸಿ ಇಬ್ಬರು ಆರೋಪಿಗಳನ್ನ ಬಂಧಿಸಿಸುವ ಮೂಲಕ ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣಕ್ಕೆ ಹುಬ್ಬಳ್ಳಿ ಲಿಂಕ್ ಇದೆ ಎನ್ನುವುದನ್ನ ಪ್ರೂವ್ ಮಾಡಿದೆ.
ಹುಬ್ಬಳಿಯ ಗೌಸಿಯ ಟೌನ್ ನಿವಾಸಿ, ಸಾಫ್ಟ್ ವೇರ್ ಇಂಜಿನಿಯರ್ ಶೋಯೆಬ್ ವಿರ್ಜಾ ಹಾಗೂ ಆತನ ಸಹೋದರ ಆಜೀಬ್ ನನ್ನ ಸದ್ಯ NIA ವಶಪಡಿಸಿಕೊಂಡಿದ್ದಾರೆ.
ಇನ್ನ ಈ ಇಬ್ಬರು ಆರೋಪಿಗಳು ಪ್ರಕರಣದ ಮುಖ್ಯ ಆರೋಪಿಗಳಾದ ಅಬ್ದುಲ್ ಮತಿನ್ ತಾಹ ಹಾಗೂ ಮುಸಾವೀರ್ ಹುಸೇನ್ ಗೆ ಆರ್ಥಿಕವಾಗಿ ಸಹಾಯ ಮಾಡಿರೋದು ತನಿಖೆ ಇಂದ ಬಯಲಾಗಿದೆ.
Post a comment
Log in to write reviews