Samayanews.

Samayanews.

2024-12-24 12:17:26

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಡಿಸೆಂಬರ್‌ 6ಕ್ಕೆ ರಶ್ಮಿಕಾ ಮಂದಣ್ಣ ನಟನೆಯ 2 ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್

ನಟಿ ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್​ನಲ್ಲಿ ಸಖತ್ ಡಿಮ್ಯಾಂಡ್​ ಇದೆ. 2023ರಲ್ಲಿ ‘ವಾರಿಸು’, ‘ಮಿಷನ್​ ಮಜ್ನು’, ‘ಅನಿಮಲ್​’ ಸಿನಿಮಾಗಳ ಮೂಲಕ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಗೆಲುವು ಸಿಕ್ಕಿತು. 2024ರಲ್ಲಿ ರಶ್ಮಿಕಾ ನಟನೆಯ ಎರಡು ಸಿನಿಮಾಗಳು ಏಕಕಾಲಕ್ಕೆ ಬಿಡುಗಡೆ ಆಗಲಿವೆ ಎಂಬುದು ವಿಶೇಷ. ಹೌದು, ‘ಅನಿಮಲ್​’ ಮತ್ತು ‘ಛಾವ’ ಸಿನಿಮಾಗಳು ಈ ವರ್ಷ ಡಿಸೆಂಬರ್​ನಲ್ಲಿ ತೆರೆಕಾಣಲಿವೆ ಎನ್ನಲಾಗಿದೆ.

ವಿಕ್ಕಿ ಕೌಶಲ್​ ಜೊತೆ ರಶ್ಮಿಕಾ ಅಭಿನಯಿಸಿರುವ ‘ಛಾವ’ ಸಿನಿಮಾ ಟೀಸರ್​ ಇಂದು (ಆಗಸ್ಟ್​ 19) ಬಿಡುಗಡೆ ಆಗಿದೆ. ಇದರಲ್ಲಿ ಐತಿಹಾಸಿಕ ಕಥಾಹಂದರ ಇದೆ ಎನ್ನಲಾಗಿದೆ. ಈ ಟೀಸರ್​ ಹಂಚಿಕೊಂಡಿರುವ ನಟ ವಿಕ್ಕಿ ಕೌಶಲ್​ ಅವರು ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ನೀಡಿದ್ದಾರೆ. ಡಿಸೆಂಬರ್​ 6ರಂದು ‘ಛಾವ’ ಸಿನಿಮಾ ರಿಲೀಸ್​ ಆಗಲಿದೆ ಎಂದು ಅವರು ಹೇಳಿದ್ದಾರೆ.

ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿರುವ ‘ಪುಷ್ಪ 2’ ಸಿನಿಮಾ ಕೂಡ ಡಿಸೆಂಬರ್​ 6ರಂದು ತೆರೆಕಾಣಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆಗಸ್ಟ್​ 15ರಂದು ಈ ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ ಕೆಲಸಗಳು ಬಾಕಿ ಇರುವ ಕಾರಣದಿಂದ ಡಿಸೆಂಬರ್​ 6ಕ್ಕೆ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಈಗ ಅದೇ ದಿನಾಂಕದಲ್ಲೇ ‘ಛಾವ’ ಕೂಡ ರಿಲೀಸ್​ ಆಗುತ್ತದೆ ಎಂಬ ವಿಷಯ ತಿಳಿದು ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

‘ಪುಷ್ಪ 2’ ಸಿನಿಮಾ ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗಿಲ್ಲ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ, ವಿದೇಶಗಳಲ್ಲೂ ಈ ಚಿತ್ರ ಧೂಳೆಬ್ಬಿಸಲಿದೆ. ಅದೇ ರೀತಿ, ‘ಛಾವ’ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿಯೇ ಸೌಂಡು ಮಾಡಲಿದೆ. ಹೀಗೆ ಒಂದೇ ದಿನ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಯಾದರೆ ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್​ ಆಗುತ್ತದೆ. ಇದನ್ನು ತಪ್ಪಿಸಲು ಎರಡರಲ್ಲಿ ಒಂದು ಸಿನಿಮಾದ ರಿಲೀಸ್​ ದಿನಾಂಕ ಬದಲಾದರೂ ಅಚ್ಚರಿ ಏನಿಲ್ಲ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

img
Author

Post a comment

No Reviews