ರೇವ್ ಪಾರ್ಟಿಯಲ್ಲಿ ನಾನು ಭಾಗಿಯಾಗಿಲ್ಲ ಎಂದು ತೆಲುಗು ನಟಿ ಹೇಮಾ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ಆದರೆ ಹೇಮಾ ಕೂಡ ರೇವ್ ಪಾರ್ಟಿಯಲ್ಲಿ ಭಾಗಿಯಾಗಿರೋ ಮಾಹಿತಿಯನ್ನ ಪೊಲೀಸರು ದೃಢಪಡಿಸಿದ್ದಾರೆ. ಅಲ್ಲದೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಹೇಮಾಳನ್ನ ಸಿಸಿಬಿಯವರು ವಶಕ್ಕೆ ಪಡೆದು ತನಿಖೆ ನಡೆಸ್ತಿದ್ದಾರೆ.
ರೇವ್ ಪಾರ್ಟಿ ಸುದ್ಧಿ ಮೀಡಿಯಾಗಳಲ್ಲಿ ಹಂಗಾಮ ಎಬ್ಬಿಸ್ತಿದ್ದಂತೆ, ನಟಿ ಹೇಮಾ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ವಿಡಿಯೋ ಮೂಲಕ ಸ್ಪಷ್ಟನೆ ನೀಡೋ ನಾಟಕವಾಡಿದ್ದು ಬೆಳಕಿಗೆ ಬಂದಿದೆ.
ನಾನು ಫಾರ್ಮ್ ಹೌಸ್‌ನಲ್ಲಿ ಎಂಜಾಯ್ ಮಾಡ್ತಾ ಚಿಲ್ ಆಗ್ತಿದ್ದೀನಿ. ನನ್ನ ಬಗ್ಗೆ ಫೇಕ್ ನ್ಯೂಸ್ ಹಬ್ಬುತ್ತಿದೆ. ನಾನು ಹೈದ್ರಾಬಾದ್ನಲ್ಲೇ ಬಿಟ್ಟು ಎಲ್ಲೂ ಹೋಗಿಲ್ಲ. ಇಲ್ಲೊಂದು ಫಾರ್ಮ್ ಹೌಸ್ ನಲ್ಲೆ ಎಂಜಾಯ್ ಮಾಡ್ತೀದ್ದೀನಿ . ಅಲ್ಲಿ ಯಾರಿದ್ದಾರೋ ನನಗೆ ಗೊತ್ತಿಲ್ಲ. ಅದೆಲ್ಲ ಫೇಕ್ ನ್ಯೂಸ್ ನಂಬಬೇಡಿ ಏಂದಿದ್ರು.
ಆದ್ರೆ ಪೊಲೀಸರಿಗೆ ಈ ವಿಚಾರ ಗೊತ್ತಾದಾಗ ಹೇಮಾ ತಮ್ಮ ವಶದಲ್ಲೇ ಇರೋ ಫೋಟೋ ರಿವೀಲ್ ಮಾಡ್ದಾಗ ಹೇಮಾಳ ಕಳ್ಳಾಟ ಬಯಲಾಗಿದೆ.
ಈ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರು ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಇದ್ದದ್ದು ನಿಜ ಎಂದು ದೃಢಪಡಿಸಿದ್ದಾರೆ. ನಟಿ ಸೇರಿ 100 ಮಂದಿ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ರೇವ್ ಪಾರ್ಟಿ ಸಂಬಂಧ ಐವರನ್ನು ಅರೆಸ್ಟ್ ಮಾಡಿದ್ದೇವೆ. ನಟಿ ಸೇರಿ ಎಲ್ಲರ ರಕ್ತ ಮಾದರಿ ಸಂಗ್ರಹ ಮಾಡಲಾಗಿದೆ. ಡ್ರಗ್ಸ್ ಸೇವನೆ ಮಾಡಿರೋದು ಖಚಿತವಾದರೆ ವಿಚಾರಣೆಗೆ ಕರೆಸುತ್ತೇವೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
Post a comment
Log in to write reviews